ದೇಶದ ಇತಿಹಾಸದಲ್ಲಿ ನಾಳೆಯ ದಿನ ಸುವರ್ಣಾಕ್ಷರಗಳಲ್ಲಿ ಬರೆದದಿಡುವ ದಿನ : ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಆ.4- ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ದೇಶದ ಜನರ ಕನಸಾಗಿತ್ತು. ಅದು ಇಂದು ಸಾಕಾರಗೊಳ್ಳುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ ದಿನ ಸುವರ್ಣ ಅಕ್ಷರಗಳಲ್ಲಿ ಬರೆದದಿಡುವ ದಿನವಾಗಿದೆ. ಲಾಲ್‍ಕೃಷ್ಣ ಅಡ್ವಾಣಿಯವರ ರಥಯಾತ್ರೆಯಲ್ಲಿ ಭಾಗವಹಿಸಿದ ಕ್ಷಣ ನನಗೆ ಸಾರ್ಥಕ ಎನಿಸಿದೆ. ಅಂದಿನ ರಥಯಾತ್ರೆ ಕಾರ್ಯಕ್ರಮವನ್ನು ನಾನೇ ವಹಿಸಿಕೊಂಡಿದ್ದೆ.

ಅದು ನನಗೆ ಬಹಳ ಖುಷಿ ಎನಿಸಿದೆ. ಹುಬ್ಬಳ್ಳಿಯಲ್ಲಿ ನಡೆದ ರಥಯಾತ್ರೆ ನನಗೆ ಬಹಳ ಖುಷಿ ಕೊಟ್ಟಿದೆ. ಆಗ ತಾನೇ ನಾನು ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದೆ. ಹೀಗಾಗಿ ಅಡ್ವಾಣಿಯವರ ರಥಯಾತ್ರೆ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ತಿಳಿಸಿದರು.

ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿಯವರ ಕೊಡುಗೆ ಅಪಾರ. ರಾಮಮಂದಿರ ನಿರ್ಮಾಣದ ವಿಚಾರವನ್ನು ವಿರೋಧ ಪಕ್ಷಗಳು ರಾಜಕೀಯ ವಿಚಾರ ಮಾಡಿದರು. ರಾಮಮಂದಿರ ವಿಚಾರದ ಮೂಲಕ ಸಂಘರ್ಷ ಮಾಡಿದರು. ಆದರೆ, ನಾವು ಅಂದು ಮಂದಿರ ನಿರ್ಮಾಣ ಮಾಡುತ್ತೆವೆಂದು ಹೇಳಿದ್ದೇÉವು. ಅದನ್ನ ಮಾಡಿದ್ದೇವೆ ಎಂದು ತಿಳಿಸಿದರು.

ಆಡಳಿತದ ಮೇಲೆ ಪರಿಣಾಮ ಇಲ್ಲ: ಸಿಎಂ ಆಸ್ಪತ್ರೆಗೆ ದಾಖಲಾದರೂ ಆಡಳಿತದ ಮೇಲೆ ಪರಿಣಾಮ ಬೀರಿಲ್ಲ. ಕೊರೊನಾದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕ್ವಾರಂಟೈನ್ ನಲ್ಲಿದ್ದರೂ ಮುಖ್ಯಕಾರ್ಯದರ್ಶಿಯ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ವೆಂಟಿಲೇಟರ್, ಐಸಿಯು ಸಮಸ್ಯೆಯಾಗುತ್ತಿರುವ ಬಗ್ಗೆ ಇಂದು ಸಭೆ ಕರೆದಿರುವೆ. ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. 30 ಹೊಸದಾಗಿ ವೆಂಟಿಲೇಟರ್ ಬಂದಿವೆ.

ವೆಂಟಿಲೇಟರ್‍ಸಮಸ್ಯೆಯಿಲ್ಲ. ಐಸಿಯುಗಳ ಸಮಸ್ಯೆಯಿದೆ. ಅದರ ಬಗ್ಗೆಯೂ ಗಂಭೀರವಾಗಿ ಚಿಂತನೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಎಂದು ಶೆಟ್ಟರ್ ತಿಳಿಸಿದರು.

Facebook Comments

Sri Raghav

Admin