ಬಿಪಿಎಲ್‌ಗೆ ಭೂಮಿ ಹಂಚಿಕೆ : ಲೋಕಾಯುಕ್ತ ಪ್ರಕರಣ ವಿಲೇವಾರಿ ಮಾಡಿದ ನಂತರ ಮುಂದಿನ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಕನರ್ಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ದಾಬಸ್‍ಪೇಟೆ ಒಂದನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 149 ಎಕರೆ 55 ಗುಂಟೆ ಜಮೀನನ್ನು ಬಿಪಿಎಲ್ ಕಂಪೆನಿಗೆ ಹಂಚಿಕೆ ಮಾಡಿ ಶುದ್ಧ ಕ್ರಯ ಪತ್ರ ಮಾಡಿಕೊಂಡಿರುವ ವಿಚಾರ ಲೋಕಾಯುಕ್ತ ಸಂಸ್ಥೆಯಲ್ಲಿದ್ದು, ಶೀಘ್ರ ವಿಲೇವಾರಿ ಮಾಡುವಂತೆ ಮನವಿ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗರಿಕಾ ಸಚಿವ ಜಗದೀಶ್ ಶೆಟ್ಟರ್ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಶ್ರೀನಿವಾಸ ಮೂರ್ತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಪಿಎಲ್ ಕಂಪೆನಿಗೆ ಹಂಚಿಕೆಯಾಗಿರುವ ವಿಸ್ತೀರ್ಣದಲ್ಲಿ ಶೇ.5.12ರಷ್ಟು ಜಮೀನನ್ನು ಕಟ್ಟಡಕ್ಕಾಗಿ ಬಳಸಿಕೊಂಡಿದೆ. ಈ ವಿಚಾರ 2014ರಲ್ಲಿ ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಿದ್ದು, ಶುದ್ಧ ಕ್ರಯ ಪತ್ರವನ್ನು ರದ್ದು ಮಾಡಿಲ್ಲ. ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ.

ಲೋಕಾಯುಕ್ತಕ್ಕೆ ಅಗತ್ಯ ದಾಖಲೆ ಪತ್ರಗಳನ್ನು ಒದಗಿಸಿ ಈ ಪ್ರಕರಣದ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿದೆ ಎಂದರು. ಕೆಐಎಡಿಬಿಯಿಂದ ಶುದ್ಧ ಕ್ರಯ ಪತ್ರ ಪಡೆದ ನಂತರ ಬಿಪಿಎಲ್ ಕಂಪೆನಿಯು ಮಾರುತಿ ಸುಜುಕಿ ಇಂಡಿಯಾ, ಜಿಂದಾಲ್ ಅಲ್ಯೂಮಿನಿಯಂ ಹಾಗೂ ಬಿಒಸಿ ಇಂಡಿಯಾ/ ಲಿಂಬೆ ಇಂಡಿಯಾ ಕಂಪೆನಿಗಳಿಗೆ ಮಾರಾಟ ಮಾಡಿದೆ ಎಂದರು.

ಕ್ರಯಪತ್ರಗಳನ್ನು ರದ್ದು ಮಾಡುವಂತೆ ಶಾಸಕರು ಆಗ್ರಹಿಸಿದಾಗ ಲೋಕಾಯುಕ್ತ ಸಂಸ್ಥೆ ಪ್ರಕರಣವನ್ನು ವಿಲೇವಾರಿ ಮಾಡಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Facebook Comments