ಲಿಫ್ಟ್‍ನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಡದ ರಕ್ಷಣಾ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಜ.3- ಲಿಫ್ಟ್‍ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೋಗುವಾಗ ಅವರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಹೋಗಲು ಗನ್‍ಮ್ಯಾನ್‍ಗಳು ಅವಕಾಶ ನೀಡದ ಪ್ರಸಂಗ ನಡೆಯಿತು.

ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಹೊರಟರು. ಆಗ ಅವರು ಹತ್ತಿದ ಲಿಫ್ಟ್‍ನಲ್ಲೇ ಜಗದೀಶ್ ಶೆಟ್ಟರ್ ಹತ್ತಲು ಹೋದಾಗ ಅವರನ್ನು ಗನ್‍ಮ್ಯಾನ್‍ಗಳು ತಡೆದರು.

ಆದರೆ, ಸಿಎಂ ಜತೆ ಲಿಫ್ಟ್ ಒಳಗೆ ಶಿವಮೊಗ್ಗ ಸಂಸದ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ರಾಘವೇಂದ್ರ ಬಂದರು. ರಿಲ್ಯಾಕ್ಸ್ ಆಗಲು ಕೊಠಡಿಗೆ ತೆರಳಲು ಲಿಫ್ಟ್ ಬಳಿ ಜಗದೀಶ್ ಶೆಟ್ಟರ್ ಬಂದಿದ್ದರು. ಸಿಎಂ ಯಡಿಯೂರಪ್ಪ ಅವರು ಬಂದಿದ್ದನ್ನು ನೋಡಿ ಅವರಿಗೆ ಶೆಟ್ಟರ್ ಜಾಗ ಮಾಡಿಕೊಟ್ಟರು.

ಕಡೆಗೆ ಶೆಟ್ಟರ್‍ಗೆ ಲಿಫ್ಟ್ ಒಳಗೆ ಬರಲು ಗನ್‍ಮ್ಯಾನ್‍ಗಳು ನಿರಾಕರಿಸಿದ್ದರಿಂದ ಅವರು ಬೇರೆ ಲಿಫ್ಟ್ ಹತ್ತಬೇಕಾಯಿತು.

Facebook Comments

Sri Raghav

Admin