ಎಂಬಿಎ ಮಾಡಿದ್ದ ಜಹಂಗೀರ್’ಗೆ ಒಂಟಿ ಮಹಿಳೆಯರೇ ಟಾರ್ಗೆಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಪ್ರತಿಷ್ಠಿತ ಮಾಲ್‍ಗಳ ಬಳಿ ಒಬ್ಬಂಟಿ ಮಹಿಳೆಯರಿಗೆ ತಾನು ಉದ್ಯಮಿಯೆಂದು ನಂಬಿಸಿ ಕಾರಿನಲ್ಲಿ ಅಪಹರಿಸಿ ದೈಹಿಕ ದೌರ್ಜನ್ಯ, ಅತ್ಯಾಚಾರ ವೆಸಗಿ ಹಣ , ಮೊಬೈಲ್‍ಗಳನ್ನು ದೋಚುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೀರೇಶ್ವರಂ ನಿವಾಸಿ ಜಹಂಗೀರ್ ಅಲಿಯಾಸ್ ಕಾರ್ತಿಕ್‍ರೆಡ್ಡಿ (30) ಬಂಧಿತ ಆರೋಪಿ. ಈತನಿಂದ ಸ್ಕೋಡಾ ಕಾರು, ಮೊಬೈಲ್ ಹಾಗೂ ಹ್ಯಾಂಡ್ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಎಂ.ಬಿ.ಎ. ವ್ಯಾಸಂಗ ಮಾಡಿದ್ದು ಚೆನ್ನೈನ ಗ್ರೀನ್ ಕೊಕನೈಟ್ ರೆಸಾರ್ಟ್‍ನಲ್ಲಿ ಗ್ರೂಪ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ನಯವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದನು. ತನ್ನ ಮಾತಿನ ಮೋಡಿಯಿಂದಲೇ ಮಹಿಳೆಯರನ್ನು ಆಕರ್ಷಿಸಿದ್ದನು. ತನ್ನ ಕಾಮದ ತೃಷೆಗೆ ಹಲವರು ಮಹಿಳೆಯರು ಬಲಿಯಾಗಿದ್ದು ಕೆಲವರು ದೂರು ಕೊಟ್ಟರೆ ಇನ್ನೂ ಕೆಲವು ಮಹಿಳೆಯರು ಗೌರವಕ್ಕೆ ಅಂಜಿ ದೂರುಗಳನ್ನು ದಾಖಲಿಸದೆ ಇರುವುದು ತಿಳಿದುಬಂದಿದೆ. ಆರೋಪಿಯು ತನ್ನ ಕೃತ್ಯಕ್ಕೆ ಓಯೋ ಆಧಾರಿತ ವಸತಿ ಗೃಹಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದನು.

ಎಂ.ರಸ್ತೆ, ಕೆನ್ಸಿಂಗ್ಟನ್ ರಸ್ತೆಯಲ್ಲಿರುವ ಪಾರ್ಕ್ ಹೊಟೇಲ್ ಬಳಿ ಒಂಟಿಯಾಗಿ ನಿಂತಿದ್ದ ಮಹಿಳೆ ಬಳಿ ಹೋಗಿ ತಾನು ಕಾರ್ತಿಕ್‍ರೆಡ್ಡಿ ಎಂದು ಪರಿಚಯಿಸಿಕೊಂಡು ಹೊಟೇಲ್ ಉದ್ಯಮ ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿದ್ದೇನೆ, ನನ್ನ ತಂದೆ ಎಂಎಲ್‍ಎ, ತಾಯಿ ಡಾಕ್ಟರ್ ಎಂದು ಹೇಳಿ ನಮ್ಮ ಹೊಟೇಲ್‍ನಲ್ಲಿ ನೀವು ಕೆಲಸಕ್ಕೆ ಸೇರಿಕೊಳ್ಳಬಹುದೆಂದು ಮಾತನಾಡಿಸಿದ್ದಾನೆ. ನಂತರ ಸ್ಕೋಡಾ ಕಾರಿನಲ್ಲಿ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ.

ಮಾರ್ಗಮಧ್ಯೆ ಮಹಿಳೆ ಬಳಿ ಇದ್ದ ಮೊಬೈಲ್, ಪರ್ಸ್ ಕಿತ್ತುಕೊಂಡು ಆ ಮೊಬೈಲ್‍ನಿಂದಲೇ ಆನ್‍ಲೈನ್ ಮೂಕ ಕಾಡಬೀಸನಹಳ್ಳಿಯಲ್ಲಿರುವ ಓಯೋ ಆಧಾರಿತ ಕ್ಯಾಫೋ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ರೂಮ್ ಬುಕ್ ಮಾಡಿ ಅಕ್ರಮ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ತನ್ನ ಒರಿಜಿನಲ್ ಹೆಸರು ಜಹಾಂಗೀರ್, ನನ್ನ ಬಳಿ ಪಿಸ್ತೂಲ್ ಇದೆ, ನಿನ್ನನ್ನು ಸಾಯಿಸುತ್ತೇನೆ ಎಂದು ಹೆದರಿಸಿ ಅತ್ಯಾಚಾರವೆಸಗಿದ್ದಾನೆ. ತದ ನಂತರ ಮಹಿಳೆಯಿಂದಲೇ ರೂಮ್ ಬಾಡಿಗೆ ಹಣವನ್ನು ಪಾವತಿಮಾಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ್ದನು.

ನೊಂದ ಮಹಿಳೆ ವಂಚನ ಬಗ್ಗೆ ಹಲಸೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೆಪೊಲೀಸರು ಡಿಸಿಪಿ ಡಾ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿಗಳು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜಹಾಂಗೀರ್ ಬೆಂಗಳೂರು ನಗರ, ತಮಿಳುನಾಡಿ ನಲ್ಲೂ ಇದೇ ರೀತಿಯ ಕೃತ್ಯಗಳನ್ನು ವೆಸಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಯನ್ನು ಕೂಲಂಕುಷ ವಾಗಿ ವಿಚಾರಣೆಗೊಳಪಡಿಸಿದಾಗ ಈತ ಮಾಡೆಲಿಂಗ್ ಮತ್ತು ನಟಿಯನ್ನಾಗಿ ಮಾಡಿಸುವುದಾಗಿ ಮಹಿಳೆಯೊಬ್ಬರ ಎಟಿಎಂ ಕಾರ್ಡ್‍ನಿಂದಲೇ 4 ಸಾವಿರ ರೂ.ಗಳಿಗೆ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ನಂತರ ಆಕೆಯ ಮೊಬೈಲ್‍ನಿಂದಲೇ ರೂಮ್ ಬುಕ್ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಡ್ರಾಪ್ ನೆಪದಲ್ಲಿ ವಂಚನೆ: ಈತ ಮೇ 23 ರಂದು ಸಂಜೆ ಮಹಿಳೆಯೊಬ್ಬರು ಮಗುವಿ ನೊಂದಿಗೆ ತಿರುಪತಿ ದರ್ಶನ ಮುಗಿಸಿ ಹೈದ್ರಾಬಾದ್‍ಗೆ ಹೋಗಲು ಬಸ್‍ಗಾಗಿ ಕಾಯುತ್ತಿ ದ್ದಾಗ ಮಹಿಳೆಯನ್ನು ಪರಿಚಯಿಸಿಕೊಂಡು ನಾನು ಹೈದ್ರಾಬಾದ್‍ಗೆ ಹೋಗುತ್ತಿದ್ದೇನೆ, ನನ್ನ ಕಾರಿನಲ್ಲಿ ಡ್ರಾಪ್ ಮಾಡುವುದಾಗಿ ನಂಬಿಸಿ ಕಾರಿನಲ್ಲ ಕರೆದೊಯ್ದು ಮಗುವಿಗೆ ಗೊಂಬೆ ತರುತ್ತೇನೆ ಎಂದು ಹೇಳಿ ಆಕೆಯ ಡೆಬಿಟ್ ಕಾರ್ಡ್ ಪಡೆದು ಅವರಿಗೆ ತಿಳಿಯದ ಹಾಗೆ 40 ಸಾವಿರ ಹಣವನ್ನು ಸ್ವೈಪ್ ಮಾಡಿ ಡೆಬಿಟ್ ಕಾರ್ಡ್ ಅನ್ನು ವಾಪಸ್ ಕೊಟ್ಟು ನೀವು ಇಲ್ಲೇ ನಿಂತಿರಿ ಗೊಂಬೆ ಪ್ಯಾಕ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಇಷ್ಟೆಲ್ಲಾ ವಂಚನೆ ನಡುವೆ ಇನ್ನೂ ಹಲವು ಒಂಟಿ ಮಹಿಳೆಯರಿಗೆ ಮೀಡಿಯಾ ಹಾಗೂ ಅಡ್ವೈಸರ್ ಕಂಪೆನಿಗಳಲ್ಲಿ ದೊಡ್ಡ ಹುದ್ದೆ ಕೊಡಿಸುವುದಾಗಿ ಹೇಳಿ ಮೈಸೂರಿಗೆ ಕರೆದೊಯ್ದು ಹೊಟೇಲ್‍ನಲ್ಲಿ ರೂಮ್ ಬಾಡಿಗೆಗೆ ಪಡೆದು ಅತ್ಯಾಚಾರವೆಸಗಿದ್ದಾನೆ. ನಂತರ ಬೆಂಗಳೂರಿನ ವಂಡರ್‍ಲಾಗೆ ಕರೆದುಕೊಂಡು ಬಂದು ದಾಖಲಾತಿಗಳನ್ನು ತನ್ನ ತಾಯಿಗೆ ಕೊಟ್ಟುಬರುವುದಾಗಿ ಹೇಳಲಿ ಅಲ್ಲಿಂದ ಪರಾರಿಯಾಗಿದ್ದನು.

ಅಲ್ಲದೆ ತಮಿಳುನಾಡಿನಲ್ಲೂ ಮಹಿಳೆಯೊಂದಿಗೆ ಸಭ್ಯನಂತೆ ನಟಿಸಿ ಮೋಸ ಮಾಡಿದ್ದಾನೆ. ಅಲ್ಲದೆ ಚೆನ್ನೈನಲ್ಲಿ 2018ರಲ್ಲಿ ಯುವತಿಯನ್ನು ಪ್ರೀತಿಸುವುದಾಗಿ ಹೇಳಿ ರೆಸಾರ್ಟ್‍ಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿ ಅನುಚಿತವಾಗಿ ವರ್ತಿಸಿ ವಿವಿಧ ಸ್ಥಳಗಳಲ್ಲಿ ಪ್ರವಾಸ ಮಾಡಿ ವಂಚಿಸಿರುವುದು ಸಹ ಬೆಳಕಿಗೆ ಬಂದಿದೆ.

ಧೈರ್ಯವಾಗಿ ಬಂದು ದೂರು ನೀಡಿ: ಆರೋಪಿಯಿಂದ ದೌರ್ಜನ್ಯಕ್ಕೊಳಗಾದವರು ಧೈರ್ಯವಾಗಿ ಬಂದು ದೂರು ನೀಡಬಹುದಾಗಿದೆ. ದೂರು ನೀಡುವವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಡಿಸಿಪಿ ಶರಣಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments