ಇಬ್ಬರ ಮುಸ್ಲಿಮರಿಗೆ ರಾಮನಾಮ ಜಪಿಸಲು ಧಮ್ಕಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜು.22- ದುಷ್ಕರ್ಮಿಗಳ ತಂಡವೊಂದು ಇಬ್ಬರು ಮುಸ್ಲಿಮರನ್ನು ತಡೆದು ರಾಮನಾಮ ಹೇಳುವಂತೆ ಧಮ್ಕಿ ಹಾಕಿರುವ ಘಟನೆ ಮಹಾರಾಷ್ಟ್ರದ ಔರಾಂಗಬಾದ್‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಕೆಲಸದ ನಿಮಿತ್ತ ನಿನ್ನೆ ರಾತ್ರಿ ಸ್ನೇಹಿತನೊಂದಿಗೆ ಅಜಾದ್ ಚೌಕ್ ಬಳಿ ಬರುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಮ್ಮತ್ತ ಬಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಪಡಿಸಿದರು.

ಇದಕ್ಕೆ ನಿರಾಕರಿಸಿದಾಗ ಅವರು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಶೇಕ್ ಅಮೇರ್ ತಿಳಿಸಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಜನರು ತಾಳ್ಮೆಯಿಂದಿರಬೇಕು. ವದಂತಿಗಳಿಗೆ ಕಿವಿಗೊಡಬಾರದು ಎಂದು ಔರಾಂಗಬಾದ್‍ದ ಪೊಲೀಸ್ ಆಯುಕ್ತ ಚಿರಂಜೀವಿ ಪ್ರಸಾದ್ ಜನರಲ್ಲಿ ಮನವಿ ಮಾಡಿದ್ದಾರೆ.

ಜು.19ರಂದ ಬೆಗುಮಪುರದಲ್ಲಿ ಹೋಟೆಲ್ ನೌಕರ ಇಮ್ರಾನ್ ಇಸ್ಮಾಯಿಲ್ ಪಟೇಲ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದಾಗ 10 ಮಂದಿಯಿಂದ್ದ ಕಿಡಿಗೇಡಿಗಳ ತಂಡ ಇವರನ್ನು ಅಡ್ಡಗಟ್ಟಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬೆದರಿಕೆವೊಡ್ಡಿದ್ದರು. ಇದೇ ರೀತಿ ನಿನ್ನೆ ರಾತ್ರಿಯೂ ಕೂಡ ಇಂಥದೊಂದು ಘಟನೆ ನಡೆದಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

Facebook Comments