ಲಾಕ್‍ಡೌನ್‍ನಲ್ಲಿ ಸೀರೆ ನೇಯ್ದ ಕೈದಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಆ.28- ಮಹಾರಾಷ್ಟ್ರದ ಹಸೂರ್ ಪ್ರದೇಶದಲ್ಲಿನ ಸೆಂಟ್ರಲ್ ಜೈಲಿನಲ್ಲಿ ಸುಮಾರು 25 ಕೈದಿಗಳು ಹಳೆಯ ವಿದ್ಯುತ್ ಕೈ ಮಗ್ಗದಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಲಾಕ್‍ಡೌನ್ ಸಂದರ್ಭದಲ್ಲಿ ನೇಯ್ದಿದ್ದಾರೆ.

ಕಳೆದ ಜೂನ್‍ನಿಂದ ಸೀರೆ ನೇಯುವ ಕಾರ್ಯ ಶುರು ಮಾಡಿದೆವು. ದಿನಕ್ಕೆ 55 ರೂ.ನಂತೆ ಕೆಲಸ ಮಾಡಿದ್ದೇವೆ. ಹಿಂದೆ ಶರ್ಟ್, ಪ್ಯಾಂಟ್, ಮಾಸ್ಕ್ ತಯಾರಿಸುತ್ತಿದ್ದೇವೆ. ಈಗ ಹೊಸ ಪ್ರಯೋಗ ಮಾಡಿದ್ದೇವೆ ಎಂದು ಖೈದಿಯೊಬ್ಬರು ಹೇಳಿದ್ದಾರೆ.

ಸುಮಾರು 25ರಿಂದ 40 ಮೀಟರ್ ಬಟ್ಟೆ ನೇಯಲು ಬಣ್ಣ, ಒಣಗಿಸುವಿಕೆ ಸೇರಿದಂತೆ ಇತರೆ ಕಾರ್ಯವನ್ನು ಜೈಲಿನಲ್ಲಿರುವ 6 ವಿದ್ಯುತ್ ಕೈಮಗ್ಗದಲ್ಲಿ ಮಾಡಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಈಗ ಸೀರೆ ಮಾರಾಟ ಮಾಡಲು ಸಾಧ್ಯವಿಲ್ಲ. ಕೋವಿಡ್ ಸಮಸ್ಯೆ ದೂರವಾದ ಬಳಿಕ ಬಿಕರಿಗೆ ಇದನ್ನು ನೋಡುತ್ತೇವೆ ಎಂದಿದ್ದಾರೆ.

Facebook Comments

Sri Raghav

Admin