ಅಮೆರಿಕ ವಿವಿಯಲ್ಲಿ ಜೈನ ಧರ್ಮ ಅಧ್ಯಯನಕ್ಕೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ನ.24-ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಜೈನ ಧರ್ಮದ ಬಗ್ಗೆ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಮೂಲದ ಮೂವರು ದಂಪತಿಗಳು ಜೈನ ಧರ್ಮದ ಭೋದನೆಗಾಗಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ನೀಡಿರುವ ದೇಣಿಗೆ ಬಳಕೆ ಮಾಡಿಕೊಂಡು ಜೈನ ಧರ್ಮದ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜೈನ ಧರ್ಮ ವಿಭಾಗದ ಮುಖ್ಯಸ್ಥರಾಗಿ ಭಗವಾನ್ ವಿಮಲ್‍ನಾಥ್ ಸೇವೆ ಸಲ್ಲಿಸಲಿದ್ದಾರೆ. ಆಧುನಿಕ ಸಮಾಜಕ್ಕೆ ಜೈನ ಧರ್ಮದಲ್ಲಿರುವ ಅಹಿಂಸಾ ವಾದ, ಆ ಧರ್ಮದ ಆಚಾರ ವಿಚಾರಗಳನ್ನು ತಿಳಿಹೇಳಿಕೊಡುವ ಉದ್ದೇಶದಿಂದ ಡಾ.ಮೀರಾ ಮತ್ತು ಡಾ.ಜಸ್ವಂತ್ ಮೋದಿ ಅವರು ವರ್ಧಮಾನ ಪ್ರತಿಷ್ಠಾನದಿಂದ, ರೀಟಾ ಮತ್ತು ಡಾ.ನರೇಂದ್ರ ಅವರು ತಮ್ಮ ಕುಟುಂಬ ದತ್ತಿಯಿಂದ ಹಾಗೂ ರಕ್ಷಾ ಮತ್ತು ಹರ್ಷದ್ ಶಾ ಅವರು ಒಂದು ಮಿಲಿಯನ್ ಅಮೆರಿಕನ್ ಡಾಲರ್ ದೇಣಿಗೆ ನೀಡಿದ್ದಾರೆ.

Facebook Comments