ಜೈಷ್-ಐಎಸ್‍ಐ ರಹಸ್ಯ ಸಭೆ, ಭಾರೀ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್, ಭಾರತದಲ್ಲಿ ಹೈಅಲರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ರಾವಲ್ಪಿಂಡಿ,ಆ.25- ಭಯೋತ್ಪಾದಕರನ್ನು ಗಮನಾರ್ಹವಾಗಿ ನಿಗ್ರಹಿಸುತ್ತಿರುವ ಭಾರತೀಯ ಭದ್ರತಾಪಡೆಗಳ ಮೇಲೆ ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ

ಹವಣಿಸುತ್ತಿರುವಾಗಲೇ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ.  ನಿಷೇತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ (ಜೆಇಎಂ) ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ (ಐಎಸ್‍ಐ) ರಾವಲ್ಪಿಂಡಿ ನಗರದಲ್ಲಿ ಗುಪ್ತ ಸಭೆಯೊಂದನ್ನು ನಡೆಸಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಈ ಹಿನ್ನಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಜೈಷ್ ಸಂಘಟನೆಯ ನಾಯಕ ಎಮಿರ್ ಮೌಲಾನಾ ಅಬ್ದುಲ್ ರಾಫ್ ಆಶ್ಗರ್ ಹಾಗೂ ಐಎಸ್‍ಐನ ಇಬ್ಬರು ಅತ್ಯುನ್ನತ ಅಕಾರಿಗಳು ಗುಪ್ತ ಸಭೆ ನಡೆಸಿ ಭಾರತೀಯ ಸೇನೆ ಮತ್ತು ಯೋಧರ ಮೇಲೆ ವಿಧ್ವಂಸಕ ದಾಳಿಗಳನ್ನು ನಡೆಸುವ ಬಗ್ಗೆ ಗಂಭೀರ ಸಮಾಲೋಚನೆ ನಡೆಸಿ ಕುತಂತ್ರಗಳನ್ನು ರೂಪಿಸಿದ್ಧರೆ ಎಂದು ಗುಪ್ತಚರ ದಳಗಳು ಮಾಹಿತಿ ನೀಡಿವೆ.

ಈ ಸಭೆಯಲ್ಲಿ ಅಶ್ಗರ್ ಸಹೋದರ ಮೌಲಾನಾ ಅಮ್ಮರ್ ಸಹ ಭಾಗವಹಿಸಿ, ದಾಳಿಗಳ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆಗಳು ಮಿಂಚಿನ ದಾಳಿ ನಡೆಸಿ ಉಗ್ರಗಾಮಿಗಳನ್ನು ಸದೆಬಡಿದ ನಂತರ ಜೈಷ್ ಸಂಘಟನೆ ಕುಪಿತಗೊಂಡಿದೆ.

ಈ ದಾಳಿ ವೇಳೆ ಪಾಕಿಸ್ತಾನ ಸೇನಾಪಡೆಗಳಿಗೆ ಸೆರೆ ಸಿಕ್ಕಿದ ಭಾರತೀಯ ವಾಯುಪಡೆ (ಐಎಎಫ್) ವೀರಾಗ್ರಣಿ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‍ಖಾನ್ ಕ್ರಮದ ಬಗ್ಗೆ ಕುಖ್ಯಾತ ಭಯೋತ್ಪಾದಕ ಮೌಲಾನಾ ಅಮ್ಮರ್ ಆಕ್ರೋಶ ವ್ಯಕ್ತಪಡಿಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ.

ಅಲ್ಲದೇ ಜೈಷ್‍ನ ತಲೀಮ್-ಉಲ್-ಖುರಾನ್ ಮದರಸಾ ಮೇಲೆ ದಾಳಿ ನಡೆಸಿದ ಐಎಎಫ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಅಮ್ಮರ್ ಬೆದರಿಕೆ ಹಾಕಿದ್ದ.  ಭಾರತ ಮತ್ತು ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿಗಳನ್ನು ತೀವ್ರಗೊಳಿಸುವ ಸಂಬಂಧ ಕುತಂತ್ರಗಳನ್ನು ರೂಪಿಸಲು ಇಸ್ಲಾಮಾಬಾದ್‍ನಲ್ಲಿ ಇತ್ತೀಚೆಗೆ ಭಯೋತ್ಪಾದಕ ಮುಖಂಡರ ಸಭೆ ನಡೆದಿತ್ತು.

ಆ ಸಭೆಯಲ್ಲಿ ಜೈಷ್‍ನ ಕಾರ್ಯನಿರ್ವಹಣಾ ಕಮ್ಯಾಂಡರ್ ಮುಫ್ತಿ ಅಶ್ಗರ್ ಖಾನ್ ಕಾಶ್ಮೀರಿ ಮತ್ತು ಮತ್ತೊಬ್ಬ ಉಗ್ರಗಾಮಿ ನಾಯಕ ಖಾರಿ ಝರರ್ ಭಾಗವಹಿಸಿ ವಿಧ್ವಂಸಕ ದಾಳಿಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ಇಸ್ಲಾಮಾಬಾದ್, ರಾವಲ್ಪಿಂಡಿ, ಕರಾಚಿ ಸೇರಿದಂತೆ ಕೆಲವೆಡೆ ಉಗ್ರಗಾಮಿಗಳು ಇದೇ ರೀತಿಯ ಪ್ರತ್ಯೇಕ ಗುಪ್ತಸಭೆಗಳನ್ನು ನಡೆಸಿರುವುದು ಆತಂಕದ ಸಂಗತಿಯಾಗಿದೆ ಎಂದು ಗುಪ್ತಚರ ದಳದ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin