ಜಲ್ಲಿಕಟ್ಟು : 100ಕ್ಕೂ ಹೆಚ್ಚು ಯುವಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ/ಮಧುರೈ, ಜ.16- ಪೊಂಗಲ್ ಸಂದರ್ಭದಲ್ಲಿ ತಮಿಳುನಾಡಿನ ವಿವಿಧೆಡೆ ನಡೆದ ಸಾಂಪ್ರದಾಯಿಕ ಜಲ್ಲಿಕಟ್ಟು (ಓರಿ ಬೆದರಿಸುವ ಸ್ಪರ್ಧೆ) ಸಂದರ್ಭದಲ್ಲಿ 100ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಕೆಲವರನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.  ಜಲ್ಲಿಕಟ್ಟು ಆಚರಣೆ ಕೇಂದ್ರಬಿಂದುವಾದ ಮಧುರೈ ಒಂದರಲ್ಲೇ 40ಕ್ಕೂ ಹೆಚ್ಚು ಜನರು ಗೂಳಿ ತಿವಿತ ಮತ್ತು ಒದೆತದಿಂದ ಗಾಯಗೊಂಡಿದ್ದಾರೆ.

ಗೂಳಿಗಳು ಓಡುವ ರಭಸಕ್ಕೆ ಸಿಲುಕಿ ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಸ್ಪರ್ಧಿಗಳು ಸಹ ಸೇರಿದ್ದಾರೆ.  ಮಧುರೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ನಡೆಯುತ್ತಿರುವ ಜಲ್ಲಿಕಟ್ಟು ಇಂದು ಕೂಡ ಮುಂದುವರಿದಿದ್ದು, ಸಹಸ್ರಾರು ಮಂದಿ ರೋಚಕವಾದ ಮತ್ತು ಅಷ್ಟೇ ಅಪಾಯಕಾರಿಯಾದ ಈ ಕ್ರೀಡೆಯನ್ನು ವೀಕ್ಷಿಸಿ ಚಕಿತಗೊಂಡಿದ್ದಾರೆ.

Facebook Comments