ಗಡಿಯಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ, ಭಾರತೀಯ ಕೆಲ ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಸೆ.16-ಕಾಶ್ಮೀರ ಕಣಿವೆಯ ಗಣಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಭಾರತೀಯ ಸೇನೆಯ ಕೆಲ ಯೋಧರಿಗೆ ಗಾಯಗಳಾಗಿವೆ. ಜಮ್ಮುವಿನ ಪೂಂಛ್ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ನಿನ್ನೆ ತಡರಾತ್ರಿ ಪಾಕಿಸ್ತಾನಿ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘಿಸಿ ಅಪ್ರಯುತ ಗುಂಡಿನ ದಾಳಿ ನಡೆಸಿದರು.

ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮಾರ್ಟರ್‍ಗಳಿಂದ ದಾಳಿ ನಡೆಸಿದರು. ಮೆಂದಾರ್ ಪ್ರದೇಶದ ಬಾಲಾಕೋಟ್‍ನಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೇನಾಪಡೆ ವಾಹನದ ಬಳಿ ಮಾರ್ಟರ್ ಸ್ಫೋಟಗೊಂಡು ಕೆಲವು ಯೋಧರಿಗೆ ಗಾಯಗಳಾಗಿವೆ. ಭಾರತೀಯ ಯೋಧರು ತಕ್ಷಣ ದಿಟ್ಟ ಪ್ರತ್ಯುತ್ತರದ ಮೂಲಕ ಪಾಕಿಸ್ತಾನಿ ಸೇನೆಗೆ ಪ್ರತ್ಯುತ್ತರ ನೀಡಿದರು. ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು.

ಗಾಯಗೊಂಡ ಯೋಧರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Facebook Comments