ಖಾಲಿ ಇದ್ದ ರಾಜ್ಯಗಳಿಗೆ ರಾಜ್ಯಪಾಲರುಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Vovernors--1

ನವದೆಹಲಿ. ಆ.21 : ದಿಡೀರ್ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ಖಾಲಿ ಇದ್ದ ರಾಜ್ಯಪಾಲರುಗಳನ್ನು ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಶಿಪಾರಸ್ಸಿಗೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ ‌. ಮಂಗಳವಾರ ಕೇಂದ್ರ ಸರ್ಕಾರ ಬಿಹಾರ, ಹರಿಯಾಣ, ತ್ರಿಪುರ, ಮೇಘಾಲಯ ಸೇರಿದಂತೆ ಹಲವು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ.  ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಉಪ ಅಧ್ಯಕ್ಷ   ಸತ್ಯಪಾಲ್ ಮಲ್ಲಿಕ್ ಅವರನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ನೇಮಕ ಮಾಡಲಾಗಿದೆ.

ಹಾಲಿ ರಾಜ್ಯಪಾಲ ಎ.ಎನ್. ವೋಹ್ರ ಅವರ ಅಧಿಕಾರವಧಿ ಇದೇ ತಿಂಗಳ 26 ಕ್ಕೆ ಮುಗಿಯಲಿದೆ. ಸದ್ಯ ಕಣಿವೆ ರಾಜ್ಯದಲ್ಲಿ ಅಮರನಾಥ ಯಾತ್ರೆ ನಡೆಯುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.  ಇಲ್ಲಿ ರಾಷ್ಟ್ರಪತಿಗಳ ಆಡಳಿತ ಜಾರಿಯಲ್ಲಿದೆ.

ಬಿಜೆಪಿಯ ಹಿರಿಯ ನಾಯಕರಾಗಿರುವ ಸತ್ಯಪಾಲ್ ಮಲ್ಲಿಕ್ ಅವರು ಕೇಂದ್ರದ ಸಚಿವರಾಗಿ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ಇದೇ ವೇಳೆ ಪಕ್ಷದ ಮತ್ತೋರ್ವ. ಹಿರಿಯ ನಾಯಕ ಹಾಗೂ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತರಾದ ಲಾಲ್ ಜಿ ಟಂಡನ್ ಅವರನ್ನು ಬಿಹಾರದ ನೂತನ ರಾಜ್ಯಪಾಲರನ್ನಾಗಿ ನೇಮಿಸಿದೆ. ಹರಿಯಾಣಕ್ಕೆ ಸತ್ಯದೇವ ನಾರಾಯಣ ಅರ್ಯ ಅವರ ಹೆಗಲಿಗೆ ಜವಬ್ದಾರಿ ಹೊರಿಸಲಾಗಿದೆ.

ತ್ರಿಪುರ ರಾಜ್ಯಪಾಲರಾಗಿದ್ದ ತಥಗಾತ ರಾಯ್ ಅವರನ್ನು ಮೇಘಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಹರಿಯಾಣದ ರಾಜ್ಯಪಾಲರಾಗಿದ್ದ ಕಪ್ತನ್ ಸಿಂಗ್ ಸೋಲಂಕಿ ಅವರನ್ನು ತ್ರಿಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಉತ್ತರಖಾಂಡ್ ರಾಜ್ಯದ ನೂತನ ರಾಜ್ಯಪಾಲರಾಗಿ ಬೇಬಿ ರಾಣಿ ಮೌರ್ಯಾ ಅವರನ್ನು ಕೇಂದ್ರ ನೇಮಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin