ಭೂಕುಸಿತ : ಬಾಲಕಿ ಸೇರಿ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

jammuಜಮ್ಮು, ನ.4 (ಪಿಟಿಐ)- ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಒಂಭತ್ತು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟು, ಇತರ ಮೂರು ಮಂದಿ ಗಾಯಗೊಂಡಿದ್ದಾರೆ.  ರಜೌರಿ ಜಿಲ್ಲೆಯ ಚಟ್ಯಾರ್ ಗ್ರಾಮದ ಪ್ರಾರ್ಥನಾ ಮಂದಿರದ ಬಳಿ ಅಲೆಮಾರಿ ಕುಟುಂಬವೊಂದು ತಾತ್ಕಾಲಿಕ ಡೇರೆಯೊಂದರಲ್ಲಿ ನೆಲೆಸಿತ್ತು. ನಿನ್ನೆ ರಾತ್ರಿ ಸುಮಾರು 11.30ರಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿತು. ಈ ದುರ್ಘಟನೆಯಲ್ಲಿ ಬಕರ್‍ವಾಲಾ ಕುಟುಂಬದ ಬಾಲಕಿ ಹಾಗೂ ಮತ್ತೊಬ್ಬ ವ್ಯಕ್ತಿ ಭೂಸಮಾಧಿಯಾದರು. ಈ ದುರಂತದಲ್ಲಿ ಇನ್ನೂ ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments