1 ಲಕ್ಷ ಕೋಟಿ ರೂ. ದಾಟಿದ ಜನ್‍ಧನ್ ಖಾತೆ ಠೇವಣಿ…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.11(ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಐದು ವರ್ಷಗಳ ಹಿಂದೆ ಆರಂಭಿಸಿದ ಜನ್‍ಧನ್ ಯೋಜನೆಗೆ ಅದ್ಭುತ ಸ್ಪಂದನೆ ಲಭಿಸುತ್ತಿದ್ದು, ಈವರೆಗೆ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಠೇವಣಿ ಸಂಗ್ರಹವಾಗಿದೆ.

ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಕಿ-ಅಂಶ ಪ್ರಸ್ತಾಪಿಸಲಾಗಿದೆ. ಪ್ರಧಾನಮಂತ್ರಿ ಜನ್‍ಧನ್ ಯೋಜನಾ (ಪಿಎಂಜೆಡಿವೈ)ಅಡಿ ಈವರೆಗೂ 36.06 ಕೋಟಿ ಮಂದಿ ಠೇವಣಿ ಹೊಂದಿದ್ದಾರೆ.

ಒಟ್ಟು 1,00,495 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಇದೊಂದು ಮಹತ್ವದ ಸಾಧನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ.28, 2014ರಲ್ಲಿ ಆಗಿನ ಮೋದಿ ಸರ್ಕಾರ ಪಿಎಂಜೆಡಿವೈ ಜಾರಿಗೆ ತಂದಿದ್ದರು. ವರ್ಷದಿಂದ ವರ್ಷಕ್ಕೆ ಈ ಯೋಜನೆ ಜನಪ್ರಿಯವಾಗಿದೆ. ಜೂ.6ರಂದು ಈ ಯೋಜನೆಯ ಖಾತೆಗಳಲ್ಲಿ 99,695 ಕೋಟಿ ರೂ. ಸಂಗ್ರಹವಾಗಿತ್ತು.

ಅದಕ್ಕೂ ಕೆಲ ವಾರಗಳ ಹಿಂದೆ 99,232 ಕೋಟಿ ರೂ. ಠೇವಣಿ ಕ್ರೋಢೀಕರಣವಾಗಿತ್ತು. ಈಗ ಈ ಪ್ರಮಾಣ 1 ಲಕ್ಷ ಕೋಟಿ ರೂ. ದಾಟಿರುವುದು ಸಾಧನೆಯಾಗಿದೆ ಎಂದು ವಿತ್ತ ಸಚಿವಾಲಯದ ಅಂಕಿ-ಅಂಶ ವಿವರಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ