BIG BREAKING : ಜನಾರ್ಧನ್ ರೆಡ್ಡಿಗೆ ಸಿಕ್ತು ಜಾಮೀನು..!

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--0111

ಬೆಂಗಳೂರು, ನ.14- ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿಗೆ 1ನೆ ಸೆಷನ್ಸ್ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಶುಕ್ರವಾರ ಸಿಸಿಬಿ ನೀಡಿದ್ದ ನೋಟೀಸ್‍ಗೆ ಸಂಬಂಧಿಸಿದಂತೆ ಚಾಮರಾಜಪೇಟೆಯಲ್ಲಿನ ಕಚೇರಿಗೆ ಬಂದು ಹೇಳಿಕೆ ನೀಡಿದ್ದರು. ಸುದೀರ್ಘ 21 ಗಂಟೆಗಳ ಕಾಲ ಅಲ್ಲೇ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಲಾಗಿತ್ತು.

ಮಂಗಳವಾರ ರೆಡ್ಡಿ ಪರ ವಕೀಲ ಹನುಮಂತರಾಯ ಅವರು ಸಿಸಿಬಿ ಪೊಲೀಸರು ನಿಯಮಮೀರಿ ಬಂಧಿಸಿದ್ದಾರೆ, ಸಾಕ್ಷ್ಯಾಧಾರಗಳಿಲ್ಲದಿದ್ದರೂ ಯಾವುದೋ ಉದ್ದೇಶದಿಂದ ನನ್ನ ಕಕ್ಷಿದಾರರನ್ನು ಬಂಧಿಸಲಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಪ್ರಬಲ ವಾದ ಮಂಡಿಸಿದ್ದರು.

ಇದೇ ವೇಳೆ ನ್ಯಾಯಾಧೀಶರು ಕೂಡ ಸಿಸಿಬಿ ಪೊಲೀಸರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ತೀರ್ಪನ್ನು ಇಂದಿಗೂ ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನ ಜಾಮೀನು ಮಂಜೂರು ಮಾಡಲಾಗಿದ್ದು ಇಬ್ಬರೂ ಷೂರಿಟಿಗಳು ಹಾಗೂ 1 ಲಕ್ಷ ರೂ. ಬಾಂಡ್ ನೀಡುವ ಷರತ್ತನ್ನು ವಿಧಿಸಲಾಗಿದೆ. ಕೋಲಾರದ ರಘುರಾಮ ರೆಡ್ಡಿ ಮತ್ತು ನಂಜುಂಡ ರೆಡ್ಡಿ ಅವರು ಜನಾರ್ದನ ರೆಡ್ಡಿಗೆ ಶ್ಯೂರಿಟಿ ನೀಡಿದ್ದಾರೆ. ಇಂದೇ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದೆ ರೆಡ್ಡಿ ಪರ ವಕೀಲ  ಚಂದ್ರಶೇಖರ್ ಅಂಬಿಡೆಂಟ್ ಕಂಪನಿಗೂ ಜನಾರ್ಧನ ರೆಡ್ಡಿಯವರಿಗೂ ಯಾವುದೇ ಸಂಬಂಧವಿಲ್ಲ , ನಮಗೆ ಜಯ ಸಿಕ್ಕಿದೆ ಎಂದರು.

ನವೆಂಬರ್ 10ರಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 1ನೇ ಎಸಿಎಂಎಂಎಂ ನ್ಯಾಯಾಧೀಶ ಜಗದೀಶ್ ಅವರು ನವೆಂಬರ್ 24 ರವರೆಗೂ 14 ದಿನಗಳ ಕಾಲ ಜನಾರ್ದನ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇನ್ನು ಪ್ರಕರಣ ಸಂಬಂಧ ನಿನ್ನೆ ನ್ಯಾಯಾಧೀಶರು ಸಿಸಿಬಿಯನ್ನು ಪ್ರಕರಣ ದಾಖಲೆ ಮಾಡಿಕೊಂಡಿರುವುದು ಒಂದು, ತನಿಖೆ ನಡೆಯುತ್ತಿರುವುದು ಒಂದು ಅಂತ ತರಾಟೆಗೆ ತೆಗೆದುಕೊಂಡಿದ್ದರು.

Updates Awaiting….

 

Facebook Comments

Sri Raghav

Admin