ಕೊರೊನಾ ಲಾಕ್‍ಡೌನ್ ಜನಾಶ್ರಯ ಟ್ರಸ್ಟ್ ನಿಂದ ಆಹಾರ ಕಿಟ್ ಮತ್ತು ಮಾಸ್ಕ್ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು : ಕೊರೊನಾ ವೈರಸ್ ತಡೆಗಟ್ಟು ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಲಾಕ್ ಡೌನ್‍ನಿಂದ ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು ದಿನಗೂಲಿ ಕಾರ್ಮಿಕರು ಬಡವರು ಹಿಂದುಳಿದ ಮತ್ತು ಮಧ್ಯಮ ವರ್ಗದವರು ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಂದು ಜನಾಶ್ರಯ ಟ್ರಸ್ಟ್ ಬೆಂಗಳೂರು ಗೌರವಾನಿತ ಅಧ್ಯಕ್ಷ ಬಿ. ವೆಂಕಟೇಶ್ ಹೇಳಿದರು.

ತಾಲ್ಲೂಕಿನ ಎಲ್ಲೇಮಾಳ ಬಂಡಳ್ಳಿ ಶಾಗ್ಯ ಬೈಲೂರು ಮಣಗಳ್ಳಿ ಇನ್ನಿತರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬಡವರಿಗೆ ಜನಾಶ್ರಯ ಟ್ರಸ್ಟ್ ವತಿಯಿಂದ ಉಚಿತ ಆಹಾರ ಪಧಾರ್ಧ ಕಿಟ್ ಮಾಸ್ಕ್ ವಿತರಣೆ ಮಾಡಿ ಮಾತನಾಡಿದ ಅವರು ಕೊರೋನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿದೆ. ಯಾರು ಭಯ ಪಡುವ ಅಗತ್ಯ ಇಲ್ಲ. ಆದರೆ ಮುಂಜಾಗ್ರತಾ ಕ್ರಮ ವಹಿಸುವುದು ಅತ್ಯಂತ ಮುಖ್ಯವಾಗಿದೆ.

ದೇವರು ಎಲ್ಲಾರಿಗೂ ಒಳ್ಳೆಯದು ಮಾಡಲಿ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಂದಿರುವ ಮಹಾ ಮಾರಿ ಕೊರೊನಾ ವೈರಾಣು ಹೋಡಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಒಂದೇ ಮುಖ್ಯ ಅಸ್ತ್ರವಾಗಿದ್ದು ಸರ್ಕಾರದ ಆದೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.  ಟ್ರಸ್ಟ್ ವತಿಯಿಂದ ಕ್ಷೇತ್ರದಲ್ಲಿ 03 ದಿನ ಕಾಲ ಸುಮಾರು 05 ಸಾವಿರ ಆಹಾರ ಪದಾರ್ಧ ಕಿಟ್ ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಹಾಗೂ ಅಗತ್ಯ ವಿದ್ದರೆ ಇನ್ನೂ 05 ಸಾವಿರ ಕಿಟ್ ನೀಡಲು ಅಗತ್ಯ ಕ್ರಮ ವಹಿಸಲಾಗುತ್ತದೆ.

ಕೊರೊನಾ ಸೋಂಕಿನ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅಷ್ಟೊಂದು ಅರಿವು ಮತ್ತು ಮುಂಜಾಗ್ರತಾ ಕ್ರಮಗಳು ತಿಳಿಯದಿರುವುದರಿಂದ ಆಹಾರ ಪದರ್ಧಾ ವಿತರಿಸುವ ಮೊದಲು ಸ್ಯಾನಿಟೈಸರ್ಸ್‍ನಿಂದ ಕೈಗಳನ್ನು ಶುಚಿಗೊಳಿಸಿ ಮೂಗು ಬಾಯಿ ಮುಖದ ಭಾಗ ಮುಟ್ಟಿಕೊಳ್ಳದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಕಿಟ್ ಪಡೆಯವಂತೆ ಅರಿವು ಮೂಡಿಸಲಾಯಿತ್ತು.

ಮತ್ತು ಪ್ರತಿಯೊಬ್ಬರು ಮನೆಯಲ್ಲಿಯೇ ಇದ್ದು ಸ್ವಚ್ಚತೆ ಕಾಪಾಡಿಕೊಂಡು ವiಹಾಮಾರಿ ಕೊರೊನಾ ಹೋಡಿಸುವ ನಿಟ್ಟಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಎಂದು ಮನವಿ ಮಾಡಿದರು. ಆನಾಶ್ರಯ ಟ್ರಸ್ಟ್ ರಾಜ್ಯ ಪ್ರಧಾನ ಕಾರ್ಯದರ್ಶಿಲೋಕೇಶ್ ಜಟ್ಟಿ, ಅರವಿಂದ ಚಕ್ರವರ್ತಿ, ವಾಸು, ಸುಬ್ರಮಣಿ ಶಿಕ್ಷಕ ಮಾದೇಶ್, ಚಿನ್ನಸ್ವಾಮಿ ಇನ್ನಿತರರು ಇದ್ದರು.

Facebook Comments

Sri Raghav

Admin