ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.27- ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಮಾಜಿ ಮುಖ್ಯಮನಮತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ. ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಹೇಳಿದರು.

2023ಕ್ಕೆ ಜಾತ್ಯತೀತ ಜನತಾದಳದ ಹಾಗೂಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಜನತಾ ಸರಕಾರ ರಚನೆ ಮಾಡುವ ಗುರಿಯೊಂದಿಗೆ ಬಿಡದಿಬಳಿಯ ತೋಟದ ಮನೆಯಲ್ಲಿ ಆರಂಭವಾದ 4 ದಿನಗಳ ಜನತಾ ಪರ್ವ 1.0 ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ. ತಾವು ನಾಯಕರಾಗಿ ಬಂದಿದ್ದು ಎಲ್ಲಿಂದ, ಬೆಳೆದದ್ದು ಎಲ್ಲಿ? ಎಂಬುದನ್ನು ಅರಿತು ಮಾತನಾಡಬೇಕು.ಅವರ ಜತೆ ಇವರ ಜತೆ ಹೋಗುವ ಪಕ್ಷ ಎಂದು ದೂರುವ ಮುನ್ನ ಸಮ್ಮಿಶ್ರ ಸರಕಾರ ರಚನೆ ಮಾಡುವುದಕ್ಕೆ ಯಾರು ಯಾರ ನಮ್ಮ ಮನೆ ಬಾಗಿಲಿಗೆ ಬಂದರು ಎನ್ನುವುದು ನನಗೆ, ನಿಮಗೆ ಮಾತ್ರವಲ್ಲ ಇಡೀ ದೇಶಕ್ಕೆ ಗೊತ್ತಿದೆ ಎಂದರು.

ಅಪಮಾನಗಳನ್ನು ಸಹಿಸಿದ್ದೇನೆ, ಎದುರಿಸಿದ್ದೇನೆ. ಅಪಾರ ಕಾರ್ಯಕರ್ತರ ಜತೆ ಅಂತಹ ಎಲ್ಲ ನೋವುಗಳನ್ನು ನುಂಗಿದ್ದೇನೆ ಎಂದ ಗೌಡರು, ನಮ್ಮನ್ನು ನೋಡಿ ಅಪಹಾಸ್ಯ ಮಾಡುವವರಿಗೆ 2023 ರಲ್ಲೇ ಉತ್ತರ ನೀಡೋಣ ಎಂದರು.ಬಿಜೆಪಿ ಧರಿದ್ರ ಸರ್ಕಾರ ಅಂತಾರೆ.

ಈ ಸರ್ಕಾರ ತಂದವರು ಯಾರು ಸತ್ಯ ಹೇಳಬೇಕು. 5 ಕೆ.ಜಿ ಅಕ್ಕಿ ಕೊಟ್ಟೆ ಅದು ಇದು ಅಂತಾರೆ. ಆದರೂ 78 ಸೀಟೇ ಬಂದಿದ್ದು. ಸೆಕ್ಯುಲರ್ ಪಾರ್ಟಿ ಮಾಡಿಕೊಂಡು ಬಂದ ದೇವೇಗೌಡರನ್ನು ಬೀ ಟೀಂ ಅಂದರು. ಅದನ್ನು ರಾಹುಲ್ ಗಾಂ ಬಾಯಲ್ಲಿ ಹೇಳಿಸಿದರು. ತಾಳ್ಮೆ ಇದ್ದರೆ ದೇವರು ತೋರಿಸುತ್ತಾನೆ. ಮನೆ ಮನೆಗೆ ಜೆಡಿಎಸ್ ತಲುಪಿಸಬೇಕಿದೆ ಎಂದರು.

ವಾಟ್ ಈಸ್ ಜೆಡಿಎಸ್ ಅಂದ್ರೆ ಧೈರ್ಯದಿಂದ ಹೇಳಿ. ಯಾರ ಟೀಕೆ ಟಿಪ್ಪಣಿಗಳಿಗೂ ತಲೆ ಬಗ್ಗಿಸಲ್ಲ. ಇವತ್ತು ನೀವೆಲ್ಲಾ ಆಧಾರ ಸ್ಥಂಭವಾಗಿ ನಿಲ್ಲಬೇಕು. ಅನೇಕರು ನಮ್ಮ ಪಕ್ಷ ಬಿಟ್ಟು ಹೋದರು. ಅಲ್ಲಿಂದ ಇಲ್ಲಿಯವರೆಗೆ ನಡೆಸಿಕೊಂಡು ಬಂದಿದ್ದೇವೆ. ಅನೇಕರು ಈ ಪಕ್ಷ ಮುಗಿಸುತ್ತೇವೆ ಅಂತಾರೆ. ಜೆಡಿಎಸ್‍ನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಎರಡು ದಿನಗಳ ಕಾಲ ಅಭ್ಯರ್ಥಿಗಳ ಕಾರ್ಯ ನಿರ್ವಹಣೆ ಮಾರ್ಗದರ್ಶನ ನೀಡಲಾಗುತ್ತದೆ. ಅಭ್ಯರ್ಥಿಗಳು ಇಲ್ಲಿ ಹೇಳುವ ಎಲ್ಲಾ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಹೋಗಿ. ಇದೊಂದು ಹೊಸ ಪ್ರಯತ್ನ ಆಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಇದು. ನಾಲ್ಕು ದಿನ ಈ ಕಾರ್ಯಕ್ರಮ ನಡೆಯಲಿದೆ.

ಮಹಿಳಾ ಘಟಕ ಹಾಗೂ ಯುವ ಘಟಕ ಸಮಾವೇಶ ಆಗಲಿದೆ. ಇದು ಕಾರ್ಯಕರ್ತರ ಸಭೆ ಅಷ್ಟೆ ಅಲ್ಲ. ಪ್ರಾದೇಶಿಕ ಪಕ್ಷವನ್ನು ಮೇಲ್ಮಟ್ಟಕ್ಕೆ ತರುವ ಕಾರ್ಯಕ್ರಮ ಇದು. ವಿಷಯ ಸಂಗ್ರಹಣೆ ಮಾಡಿ ನಿಮ್ಮ ಮುಂದೆ ಇಟ್ಟಿದ್ದಾರೆ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಇದು ಮಾರ್ಗಸೂಚಿ ನೀಡಲಾಗುವುದು.

ಆ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಯ ಪುಸ್ತಕವನ್ನು ಕೊಟ್ಟಿದ್ದಾರೆ. ಅದನ್ನು ಸೂಕ್ಷ್ಮ ವಾಗಿ ಗಮನಿಸಿ. ಕುಮಾರಸ್ವಾಮಿ ಮನಸಲ್ಲಿ ಪಕ್ಷ ಉಳಿಸಬೇಕು ಅಂತ ಇತ್ತು. ಶಾಸಕರಲ್ಲಿ ಹಣ ಕಾಸಿನ ಸಮಸ್ಯೆ ಇತ್ತು. ಅಂತಿಮವಾಗಿ ಬಿಜೆಪಿ ಜೊತೆ ಸರ್ಕಾರ ಮಾಡಲು ತೀರ್ಮಾನ ಮಾಡಿ ಪಕ್ಷ ಉಳಿಸಲು ತೀರ್ಮಾನ ಮಾಡಲಾಯಿತು ಎಂದರು.

ಕಾಲ ಬಂದೇ ಬರುತ್ತದೆ. ಪಕ್ಷ ಮುಗಿಸಲು ಯಾರ್ಯಾರು ಏನೇನು ಮಾಡಿದ್ದಾರೆ ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸಬಲ್ಲೆ. ಆದರೆ ಕುಮಾರಸ್ವಾಮಿಯವರು ಪಕ್ಷ ಉಳಿಸಲು ತನ್ನದೇ ಆದ ಕಾರ್ಯಕ್ರಮ ರೂಪಿಸಿದರು. ಅದರಲ್ಲಿ ಈ ಕಾರ್ಯಗಾರ ಕೂಡ ಒಂದು. ಇದಕ್ಕಿಂತ ತಳಮಟ್ಟಕ್ಕೆ ಪಕ್ಷ ಹೋಗಲ್ಲ.

ಯಾರ ಬಗ್ಗೆಯೂ ಮಾತಾಡಲ್ಲ. ನಿನ್ನೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೋಡಿದೆ. ಯಾವ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗದೇ ಇದ್ದರೆ ಪಕ್ಷ ಉಳಿಯಲ್ಲ ಅಂದು ಕೊಂಡು ಅವರನ್ನು ಕರೆದುಕೊಂಡು ಹೋದರು. ಹೀಗೆಲ್ಲಾ ಇವರು ಮಾಡಿದ್ದಾರೆ. ಈ ಪಕ್ಷಕ್ಕೆ ದೈವಾನುಗ್ರಹ ಇದೆ. ಕಷ್ಟ ಕಾಲದಲ್ಲಿ ಹೋರಾಟ ಮಾಡಿದ್ದೇವೆ. ಅದೆಲ್ಲ ಈಗ ಬೇಡ ಎಂದು ಅವರು ಹೇಳಿದರು.

Facebook Comments