ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಶೇ.15ರಷ್ಟು ಡಿವಿಡೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19- ಉತ್ತಮ ಸ್ಪಂದನೆ ಮತ್ತು ನಿಮ್ಮೆಲ್ಲರ ಸಹಕಾರದಿಂದ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಉತ್ತಮ ಸಾಧನೆ ಮಾಡಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಎಚ್.ಸಿ.ಗೋಪಾಲ್ ಹೇಳಿದರು.ಇಂದು ವಚ್ರ್ಯುವಲ್ ಮೂಲಕ ನಡೆದ ಬ್ಯಾಂಕ್‍ನ 40ನೆ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಗ್ರಾಹಕ ಸದಸ್ಯರು ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಉತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ.

ಈ ನಿಟ್ಟಿನಲ್ಲಿ 2020-2021ನೆ ಸಾಲಿಗೆ ಶೇ.15ರಷ್ಟು ಡಿವಿಡೆಂಟ್ ಘೋಷಣೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.ಈಗಾಗಲೇ ನಮ್ಮ ಬ್ಯಾಂಕ್‍ನ ಶಾಖೆಗಳಲ್ಲಿ ಸದಸ್ಯರಿಗೆ ಮನೆ ಸಾಲ, ಕೈಗಾರಿಕೆ ಸಾಲ, ವಾಹನ ಸಾಲ ಸೇರಿದಂತೆ ಹಲವು ವಿಧದಲ್ಲಿ ನೆರವು ನೀಡಿದ್ದೇವೆ.ಅದರಂತೆಯೇ ಕಾಲ ಕಾಲಕ್ಕೆ ಸರಿಯಾಗಿ ಸಾಲ ಮರು ಪಾವತಿ ಮಾಡಿರುವುದರಿಂದ ಬ್ಯಾಂಕ್ ಮತ್ತಷ್ಟು ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂದು ಅವರು ಹೇಳಿದರು.

ಆಡಳಿತಮಂಡಳಿ ಸಭೆಯಲ್ಲಿ ಮತ್ತಷ್ಟು ಉತ್ತಮ ಸೇವೆಯನ್ನು ತಂತ್ರಜ್ಞಾನದ ಮೂಲಕ ಅಳವಡಿಸುವ ಕುರಿತು ಚರ್ಚೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮುಂದುವರೆದರೆ ಮತ್ತಷ್ಟು ಎತ್ತರಕ್ಕೆ ಬೆಳೆಯಬಹುದು. ಈ ನಿಟ್ಟಿನಲ್ಲಿ ಹೊಸ ಗುರಿಯೊಂದಿಗೆ ಮುನ್ನಡೆಯೋಣ ಎಂದು ಗೋಪಾಲ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Facebook Comments

Sri Raghav

Admin