ಜಪಾನ್‍ಗೂ ಒಕ್ಕರಿಸಿದ ಓಮಿಕ್ರಾನ್

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ ನ.30- ವಿಶ್ವದ 14 ದೇಶಗಳ ಬಳಿಕ ಈಗ ಜಪಾನ್‍ಗೂ ಓಮಿಕ್ರಾನ್ ಒಕ್ಕರಿಸಿದೆ. ರಾಷ್ಟ್ರ ರಾಜಧಾನಿ ಟೋಕಿಯೋ ಸಮೀಪದ ನರೀಟ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ ನಂಬಿಯಾನ್ ದೇಶದ 30 ವರ್ಷದ ಪ್ರಜೆಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ.

ಇದು ಭಾರೀ ರೂಪಾಂತರಿ ಸೋಂಕಾಗಿದ್ದು ಅಪಾಯಕಾರಿ ಎಂದು ವಿಶ್ಲೇಷಿಸಲಾಗಿದೆ. ಸೋಂಕು ಪತ್ತೆಯಾಗುತ್ತಿದ್ದಂತೆ ಜಪಾನ್ ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಒಂದು ತಿಂಗಳ ಕಾಲ ನಿಷೇಸಿದೆ. ಇಂದಿನಿಂದಲೇ ವಿಮಾನ ಹಾರಾಟಗಳು ಸ್ಥಗಿತಗೊಂಡಿವೆ.

Facebook Comments