ಜಪಾನ್‍ನಲ್ಲಿ ಭಾರೀ ಪ್ರವಾಹ, 50 ಸಾವು, 12 ಮಂದಿ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ, ಜು.7- ಉದಯರವಿ ನಾಡು ಜಪಾನ್‍ನ ದಕ್ಷಿಣ ಕ್ಯೂಷು ಪ್ರಾಂತ್ಯದಲ್ಲಿ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.  ಈ ಪ್ರಕೃತಿ ವಿಕೋಪದಲ್ಲಿ 12ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಕುಮಮೊಟು ಮತ್ತು ಪುಕೌಕಾ ಪ್ರದೇಶಗಳಲ್ಲಿ ನೆರ ಹಾವಳಿಯಿಂದ ಭಾರೀ ಸಂಕಷ್ಟ ಸಂಭವಿಸಿದ್ದು, 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.  ಮಳೆ ಮತ್ತು ಪ್ರವಾಹದಿಂದ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಒಂದು ಡಜನ್ ಜನರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

Facebook Comments