ಒಲಂಪಿಕ್ ತಯಾರಿ ಆರಂಭಿಸಿದ ಜಪಾನ್

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ,ಜೂ.17-ಒಲಂಪಿಕ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಜಪಾನ್ ಟೋಕಿಯೊ ಮತ್ತು ಸುತ್ತಮುತ್ತಲ ಆರು ಪ್ರದೇಶಗಳನ್ನು ಕೊರೊನಾ ಮುಕ್ತಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಒಲಂಪಿಕ್ ನಡೆಯಲಿರುವ ಟೋಕಿಯೋ ಮತ್ತು ಒಸಾಕಾ ನಗರದಲ್ಲಿ ಇತ್ತಿಚೆಗೆ ಹೊರ ರೂಪಾಂತರಿ ವೈರಾಣು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿತ್ತು. ಇದೀಗ ಟೋಕಿಯೊದಲ್ಲಿ ಸೋಂಕು ಪ್ರಮಾಣ ಇಳಿಮುಖವಾಗುತ್ತಿರುವುದರಿಂದ ಇಡೀ ಪ್ರದೇಶವನ್ನು ತುರ್ತು ಪ್ರದೇಶಗಳೆಂದು ಗುರುತಿಸಿ ಕೊರೊನಾ ಸಂಪೂರ್ಣ ನಿರ್ಮೂಲನೆಗೆ ಜಪಾನ್ ಮುಂದಾಗಿದೆ.

ಜುಲೈ 23 ರಿಂದ ಆರಂಭವಾಗಲಿರುವ ಒಲಂಪಿಕ್‍ಗೆ ಯಾವುದೆ ಅಡ್ಡಿ, ಆತಂಕ ಎದುರಾಗದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಪಾನ್ ಪ್ರಧಾನ ಮಂತ್ರಿ ಯಶಿಹಿಡೆ ಸುಗಾ ತಿಳಿಸಿದ್ದಾರೆ.

ಚುನಾವಣೆಗೆ ಮುನ್ನ ಸುಗಾ ಅವರು ಒಲಂಪಿಕ್ ಪಂದ್ಯ ನಡೆಸುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎಂದು ಅವರ ಎದುರಾಳಿಗಳು ಆರೋಪಿಸಿದ್ದಾರೆ.

ಒಟ್ಟಾರೆ, ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಜಪಾನ್ ಒಲಂಪಿಕ್ ಪಂದ್ಯ ನಡೆಸುವುದೇ ಇಲ್ಲವೇ ಎನ್ನುವುದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Facebook Comments

Sri Raghav

Admin