ಒಲಿಂಪಿಕ್ ಮುಂದೂಡಿಕೆ ಮುನ್ಸೂಚನೆ ನೀಡಿದಜಪಾನ್ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ, ಮಾ.23- ಕೊರೊನಾ ವೈರಾಣು ಸೋಂಕಿನ ಕಾಟದಿಂದಒಲಿಂಪಿಕ್ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿರುವಾಗಲೇ, ಈ ಪ್ರತಿಷ್ಠಿತ ಕ್ರೀಡಾಕೂಟ ಮುಂದೂಡಿಕೆ ಸಾಧ್ಯತೆ ಬಗ್ಗೆ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಮುನ್ಸೂಚನೆ ನೀಡಿದ್ದಾರೆ.

ಕ್ರೀಡಾಕೂಟ ಮುಂದೂಡುವಂತೆ ವಿವಿಧ ದೇಶಗಳ ಅಥ್ಲೆಟ್‍ಗಳು ಮತ್ತುಕ್ರೀಡಾ ಸಂಸ್ಥೆಗಳು ವ್ಯಾಪಕಒತ್ತಡ ಹೇರುತ್ತಿರುವುದರಿಂದ ಒಲಿಂಪಿಕ್ ಆಯೋಜನೆಯನ್ನು ವಿಳಂಬ ಮಾಡುವ ಬಗ್ಗೆ ಪರಿಶೀಲಿಸುವುದಾಗಿಒಲಿಂಪಿಕ್ ಸಮಿತಿ ನಿನ್ನೆಯಷ್ಟೇ ತಿಳಿಸಿತ್ತು.

ಇದರ ಬೆನ್ನಲ್ಲೇಅತಿಥೇಯದೇಶಜಪಾನ್ ಪ್ರಧಾನಿ ಅಬೆ, ಟೋಕಿಯೋ ಒಲಿಂಪಿಕ್-2020 ಕ್ರೀಡಾಕೂಟವನ್ನು ಮುಂದೂಡುವುದು ಅನಿವಾರ್ಯವಾಗಬಹುದು ಎಂದು ತಿಳಿಸಿದ್ದಾರೆ.  ಈ ಕುರಿತು ಹೇಳಿಕೆ ನೀಡಿರುವಅವರು 2020ರ ಗೇಮ್‍ಗಳು ನಿಗದಿಯಾದಜುಲೈ 24ರಿಂದ ಆರಂಭವಾಗುವ ಸಾಧ್ಯತೆಇಲ್ಲಎಂದು ತಿಳಿಸಿದ್ದಾರೆ.

ಪೂರ್ವ ನಿಗದಿಯಾಗಿರುವ ದಿನಾಂಕಗಳಲ್ಲಿ ತನ್ನ ಅಥ್ಲಿಟ್‍ಗಳನ್ನು ಒಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸಲು ಸಾಧ್ಯವಾವುದಿಲ್ಲ ಎಂದು ಈಗಾಗಲೇ ಅನೇಕ ದೇಶಗಳು ತನ್ನ ಅಸಹಾಯಕತೆಯನ್ನು ಸ್ಪಷ್ಟಪಡಿಸಿವೆ. ಕೊರೊನಾ ಕಾಟದಿಂದ ಒಳಿಂಪಿಕ್ ಕ್ರೀಡಾಕೂಟವನ್ನು ಮುಂದಿವನ ವರ್ಷಕ್ಕೆ ಮುಂದೂಡಬೇಕೆಂಬ ಒತ್ತಡಗಳು ವ್ಯಾಪಕವಾಗಿವೆ.

Facebook Comments

Sri Raghav

Admin