ಸೇನಾ ಶಿಬಿರದ ಮೇಲೆ ಉಗ್ರರ ದಾಳಿ : ಯೋಧ, ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Army-Camp--1

ಶ್ರೀನಗರ, ಮೇ 28-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ದಕ್ಷಿಣ ಕಾಶ್ಮೀರದ ಪಲ್ವಾಮಾ ಜಿಲ್ಲೆಯ ಕಾಕಾಪೊರಾದ ಸೇನಾ ಶಿಬಿರವೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದು, ನಾಗರಿಕನೊಬ್ಬ ಬಲಿಯಾಗಿದ್ಧಾನೆ.  ಸೇನೆಯ 50ನೇ ರಾಷ್ಟ್ರೀಯ ರೈಫಲ್ಸ್ ಶಿಬಿರದ ಮೇಲೆ ನಿನ್ನೆ ತಡರಾತ್ರಿ ಈ ದಾಳಿ ನಡೆದಿದೆ. ಉಗ್ರರ ಆಕ್ರಮಣದಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದಾರೆ. ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಗಾಯಗೊಂಡಿದ್ದ ಸುಮೋ ವಾಹನ ಚಾಲಕ ಬಿಲಾಲ್ ಅಹಮದ್ ಗನಿಯಾ ಅಸುನೀಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಅಸ್ಲಾಂ ಚೌಧರಿ ಹೇಳಿದ್ದಾರೆ.  ಗುಂಡಿನ ಚಕಮಕಿ ವೇಳೆ ಸ್ಥಳದಿಂದ ಪರಾರಿಯಾಗಿರುವ ಉಗ್ರರಿಗಾಗಿ ಶೋಧ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.  ರಂಜಾನ್ ಮಾಸದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ ನಿಲುಗಡೆಯಾಗಿರುವ ಸಂದರ್ಭದಲ್ಲೇ ಉಗ್ರರ ಹಿಂಸಾಚಾರವೂ ತೀವ್ರಗೊಂಡಿದೆ.

Facebook Comments

Sri Raghav

Admin