ದೇಶಕ್ಕೆ 2ನೆ ಸ್ವಾತಂತ್ರ್ಯ ತಂದುಕೊಟ್ಟರು ಜಯಪ್ರಕಾಶ್ ನಾರಾಯಣ್ : ಎಚ್‍ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.11- ಜಯಪ್ರಕಾಶ್ ನಾರಾಯಣ್ ಅವರು ದೇಶಕ್ಕೆ ಎರಡನೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರು ತಿಳಿಸಿದರು. ಜೆಡಿಎಸ್ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಲೊಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ 119 ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮ ಗಾಂೀಧಿಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಜಯಪ್ರಕಾಶ್ ನಾರಾಯಣ್ ಅವರು ಎರಡನೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಅದು ಕೂಡ ಈಗ ನಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಮುಂದೇನಾಗುತ್ತದೆ ಎಂಬುದು ಗೊತ್ತಿಲ್ಲ. ಎಲ್ಲರೂ ಕೂಡ ಅಕಾರದ ಮಂತ್ರವನ್ನೇ ಜಪಿಸುತ್ತಿದ್ದಾರೆ. ಎಲ್ಲರೂ ಅಕಾರ ಅಕಾರ ಎನ್ನುತ್ತಿದ್ದಾರೆ. ಮಹಾತ್ಮ ಗಾಂೀಜಿ ಅವರ ಕಾಂಗ್ರೆಸ್ ಏನಾಗುತ್ತಿದೆ ಎಂದು ಪ್ರಶ್ನಿಸಿದರು.

ಮಧ್ಯ ಪ್ರದೇಶದ ಛಂಬಲ್ ಕಣಿವೆಯಲ್ಲಿ ದರೋಡೆ ಮಾಡುತ್ತಿದ್ದ ಪೂಲನ್‍ದೇವಿ ಅವರ ಮನವೊಲಿಸಿ ಆಯುಧಗಳೊಂದಿಗೆ ಶರಣಾಗತಿ ಯಾಗುವಂತೆ ಮಾಡಿದ್ದವರು ಜೆಪಿ. ಆ ಕಾರಣಕ್ಕಾಗಿಯೇ ಜೆಡಿಎಸ್ ಕಚೇರಿಗೆ ಜೆಪಿ ಭವನ ಎಂದು ನಾಮಕರಣ ಮಾಡಲಾಗಿದೆ. 1957ರಲ್ಲಿ ವೈ.ವೀರಪ್ಪ ಎಂಬುವವರ ಪರವಾಗಿ ಭಾಷಣ ಮಾಡಲು ನಮ್ಮ ಊರಿಗೆ ಜೆಪಿ ಬಂದಿದ್ದರು. ನಮ್ಮ ಹಳ್ಳಿಗಾಡು ನೋಡಿ ನೊಂದುಕೊಂಡರು.

ಮಹಾತ್ಮ ಗಾಂೀಜಿ ಅವರು ಅದ್ಧೂರಿ ಜೀವನ ನಡೆಸಲಿಲ್ಲ. ಈಗ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಕರೆಸಿ ಭಾಷಣ ಮಾಡಿಸುತ್ತಾರೆ. ಈಗಿನ ರಾಜಕೀಯಕ್ಕೂ, ಆಗಿನ ರಾಜಕೀಯಕ್ಕೂ ಓಲೈಕೆ ಮಾಡಿದೆ ಅಷ್ಟೆ. ನಾನು ಬಿಜೆಪಿ ಅಥವಾ ಆರ್‍ಎಸ್‍ಎಸ್‍ಗೆ ಸೇರಿದವನಲ್ಲ. ಆರ್‍ಎಸ್‍ಎಸ್ ಬಗ್ಗೆ ಟೀಕೆ ಮಾಡುವುದಿಲ್ಲ.

ವಾಸ್ತವಾಂಶ ಹೇಳುತ್ತೇನೆ. ಇನ್ನು ಮುಂದಾದರೂ ಶಕ್ತಿ ಮೀರಿ ನಮ್ಮ ಪಕ್ಷವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಯುವ ಪೀಳಿಗೆ ಜೆಪಿ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮ ರೂಪಿಸಬೇಕು. ಈ ದೇಶದಲ್ಲಿ ಮತ್ತೊಬ್ಬ ಜಯ ಪ್ರಕಾಶ್ ಅವರನ್ನು ನೋಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Facebook Comments