ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಬದಲಾವಣೆಗಾಗಿ ಒಂದು ಬಣದ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.6- ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಬದಲಾವಣೆಗಾಗಿ ಒಂದು ಬಣ ಲಾಬಿ ನಡೆಸತೊಡಗಿದೆ.  ಮಾಧುಸ್ವಾಮಿ ಅವರನ್ನು ಬದಲಾವಣೆ ಮಾಡಿ ಅವರ ಸ್ಥಾನಕ್ಕೆ ವಸತಿ ಸಚಿವ ಸೋಮಣ್ಣ ಅವರನ್ನು ತಂದು ಕೂರಿಸುವ ಪ್ರಯತ್ನಕ್ಕೂ ಕೈ ಹಾಕಲಾಗಿದೆ.  ಮಾಧುಸ್ವಾಮಿ ಅವರಿಗೆ ಆರಂಭದಲ್ಲಿ ತುಮಕೂರು ಮತ್ತು ಹಾಸನ ಜಿಲ್ಲಾಯ ಉಸ್ತುವಾರಿ ನೀಡಲಾಗಿತ್ತು.

ಸಂಪುಟ ವಿಸ್ತರಣೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿಯಿಂದ ಅವರನ್ನು ಕೈ ಬಿಡಲಾಗಿತ್ತು. ಅವರು ಉಸ್ತುವಾರಿಯಾಗಿದ್ದ ಸಂದರ್ಭದಲ್ಲೇ ಜಿಲ್ಲೆಯ ಹೆಚ್ಚಿನ ಕೆರೆಗಳಿಗೆ ಹೇಮಾವತಿಯನ್ನು ಹರಿಸುವ ಪ್ರಯತ್ನ ಮಾಡಿದ್ದರು.

ಜಿಲ್ಲೆಗಾಗಿ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದರೂ ಅವರನ್ನು ಉಸ್ತುವಾರಿ ಸಚಿವರಿಂದ ಬದಲಿಸುವ ಕಾರ್ಯಕ್ಕೆ ಮುಂದಾಗಿರುವವರು ಯಾರು? ಅವರ ಬದಲಾವಣೆಗೆ ಕಾರಣವೇನು ಎಂಬ ಪ್ರಶ್ನೆ ಕಾಡುತ್ತಿದೆ.

ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್‍ಪಿ ಅವರನ್ನು ಎತ್ತಂಗಡಿ ಮಾಡುವಂತೆ ಕೆಲ ಪ್ರಭಾವಿಗಳು ಒತ್ತಡ ಹಾಕಿದ್ದರು. ಆದರೆ, ಈ ಒತ್ತಡಗಳಿಗೆ ಮಾಧುಸ್ವಾಮಿ ಮನ್ನಣೆ ನೀಡದಿರುವುದು ಅವರ ವಿರುದ್ಧದ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಶಿವಮೊಗ್ಗ ಜಿಪಂ ಸಿಇಒ ಆಗಿದ್ದ ರಾಕೇಶ್ ಕುಮಾರ್ ಅವರನ್ನು ತುಮಕೂರಿಗೆ ತಂದಿದ್ದೇನೆ.

ಇಲ್ಲಿ ಜತಿಯ ಬಣ್ಣ ಬೇಡ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದರ ಪರಿಣಾಮ ಯಡಿಯೂರಪ್ಪ ಸಂಸದರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ.

ಆದರೆ, ಉದ್ಧಟತನ ತೋರಿದ್ದ ಡಿಹೆಚ್‍ಒ ಚಂದ್ರಕಲಾ ಅವರ ವರ್ಗಾವಣೆಯಲ್ಲಿ ಮಾತ್ರ ಮಾಧುಸ್ವಾಮಿ ಅವರ ಪಾತ್ರವಿತ್ತು.  ಗುಬ್ಬಿ ತಾಲೂಕಿನ ತಿಪ್ಪೂರಿನಲ್ಲಿ ದೇವಾಲಯದ ಇನಾಮತಿ ಜಮೀನಿನಲ್ಲಿ ತೆಂಗಿನ ಮರ ಕಡಿದ ಪ್ರಕರಣದಲ್ಲಿ ಕಂದಾಯ ಸಚಿವರ ಕೆಂಗಣ್ಣಿಗೆ ಗುರಿಯಾಗಿದ್ದ ತಹಸೀಲ್ದಾರ್ ಮಮತಾ ಅವರ ವರ್ಗಾವಣೆಯನ್ನು ಮಾಧುಸ್ವಾಮಿ ಅವರೇ ತಡೆಹಿಡಿಸುವಲ್ಲಿ ಯಶಸ್ವಿಯಾಗಿದ್ದರು.

ಜಿಲ್ಲೆಗೆ ಇಷ್ಟೆಲ್ಲ ಉಪಕಾರ ಮಾಡುತ್ತಿರುವ ಪ್ರಭಾವಿಗಳು ಅವರ ಜಾಗಕ್ಕೆ ಸೋಮಣ್ಣ ಅವರನ್ನು ತಂದು ಕೂರಿಸಲು ಮುಂದಾಗಿರುವುದು ಏಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಮಾಧುಸ್ವಾಮಿ ಹಾಗೂ ಸೋಮಣ್ಣ ಒಂದೇ ಜತಿಗೆ ಸೇರಿದವರು ಎಂಬುದನ್ನು ಬಿಟ್ಟರೆ ಇನ್ನಾವುದೇ ಅರ್ಹತೆಗಳನ್ನು ನಾವು ಕಾಣಲಾಗುತ್ತಿಲ್ಲ.

ಮಾಧುಸ್ವಾಮಿ ಅವರು ಜಿಲ್ಲಾಯ ರಾಜಕಾರಣಿ, ಇ¯್ಲಲ್ಲಾಹುಟ್ಟಿ ಬೆಳೆದವರು. ಅವರಿಗೆ ಜಿಲ್ಲಾಯ ಬಗ್ಗೆ ಇರುವಷ್ಟು ಮಮಕಾರ ಸೋಮಣ್ಣನವರಿಗೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಪಕ್ಷ ನಿಷ್ಠರು.

ಸೋಮಣ್ಣನವರು ತಮ್ಮ ಪುತ್ರ ಅರುಣ್ ಸೋಮಣ್ಣ ಅವರನ್ನು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಲು ಮನಸ್ಸು ಮಾಡಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಲಾಬಿ ನಡೆಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಸುರೇಶ್‍ಗೌಡರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ ದೊರಕುತ್ತಿದ್ದಂತೆ ಅವರ ಪರವಿದ್ದ ಮಾಜಿ ಸಚಿವ ಸೊಗಡು ಶಿವಣ್ಣನವರು ಮಾಧುಸ್ವಾಮಿ ವಿರೋಧಿ ಪಾಳಯದ ಡ್ಯಾಡ್ ಅಂಡ್ ಸನ್ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಗುಮಾನಿ ಎದುರಾಗಿದೆ.

ಡ್ಯಾಡಿಗೆ ವಯಸ್ಸಾಗಿರುವ ಕಾರಣ ಮುಂದಿನ ಚುನಾವಣೆಯಲ್ಲಿ ಸನ್ ಲೋಕಸಭೆಗೆ ಸ್ಪರ್ಧಿಸುವುದು ಹಾಗೂ ಶಿವಣ್ಣನವರಿಗೆ ವಿಧಾನಸಭೆಗೆ ಟಿಕೆಟ್ ಕೊಡಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಾಲ್ವರ ಪ್ರಭಾವಿ ಕೂಟ ಮಾಧುಸ್ವಾಮಿ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ. ಈ ಷಡ್ಯಂತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮಣೆ ಹಾಕುವರೋ ಇಲ್ಲವೋ ಕಾದು ನೋಡಬೇಕಿದೆ.

Facebook Comments