ಸಿದ್ದರಾಮಯ್ಯಗೆ ಸಚಿವ ಜೆ.ಸಿ.ಮಾಧುಸ್ವಾಮಿ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.9-ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ಕೊಟ್ಟಿರುವುದನ್ನು ವಿರೋಧಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲು ತಾವು ಮಾಡಿದ ತಪ್ಪನ್ನು ಮೆಲುಕು ಹಾಕಲಿ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಟಾಂಗ್ ಕೊಟ್ಟಿದ್ದಾರೆ.  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಸೌಧದಲ್ಲಿ ವೀಡಿಯೋ ನೋಡಿದ್ದು ನೈತಿಕ ತಪ್ಪು, ಆ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ.

ಹಾಗಂತ ಅದು ದೇಶದ್ರೋಹದ ಕೆಲಸವಲ್ಲ. ಸಿದ್ದರಾಮಯ್ಯರ ಇದನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರ ಕ್ರಿಯಿಸಿದರು. ಸಿದ್ದರಾಮಯ್ಯ ಕೂಡ ನಾವೆಲ್ಲಾ ದೇವಸ್ಥಾನ ಎಂದು ಭಾವಿಸುವ ವಿಧಾನ ಸೌಧದ ಪ್ರಮುಖ ದ್ವಾರದ ಬಾಗಿಲನ್ನು ಕಾಲಿನಿಂದ ಒದ್ದಿದ್ರು. ಇದು ಪವಿತ್ರ ಸ್ಥಳಕ್ಕೆ ಮಾಡಿದ ಅಪಚಾರ ಅಲ್ಲವೇ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋತವರಿಗೆ ಡಿಸಿಎಂ ಸ್ಥಾನ ಕೊಟ್ಟ ವಿಚಾರದಲ್ಲಿ ವಿಪಕ್ಷದವರು ಸುಮ್ಮನೆ ಅಪಪ್ರಚಾರ ಮಾಡುತ್ತಾರೆ. ಯುಪಿಎ ಸರ್ಕಾರದಲ್ಲಿ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಎರಡು ಬಾರಿ ಯಾವ ಸಾರ್ವತಿಕ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಎಂದು ಕಾಂಗ್ರೆಸ್ ನವರೇ ಉತ್ತರಕೊಡಬೇಕು ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ಎಲ್ಲ ಹಂತಗಳಲ್ಲಿಯೂ ಅತಿವೇಗವಾಗಿ ಟೇಕ್ ಆಫ್ ಆಗಿದೆ. ಯಡಿಯೂರಪ್ಪನವರು ಕಾಲಿಗೆ ಚಕ್ರಕಟ್ಟಿಕೊಂಡ ವರಂತೆ ಓಡಾಡಿದ್ದಾರೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಲ್ಲ ಹಂತಗಳಲ್ಲಿಯೂ ರಾಜ್ಯ ಸರ್ಕಾರವೇ ವಿಮಾನದ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ತುಮಕೂರಿನ ಸ್ಮಾರ್ಟ್ ಸಿಟಿ ಯೋಜನೆಗಳು ಸಾಕಷ್ಟು ಕಳಪೆಯಾಗಿವೆ ಯಾವಾಗ ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಈಗಾಗಲೇ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರಿಂದ ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ ಅಲ್ಲದೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಾಲಿನಿ ಅವರ ಜೊತೆಯೂ ಕೂಡ ಚರ್ಚೆ ನಡೆಸಿದ್ದೇನೆ ಇದರ ಬಗ್ಗೆ ಸದ್ಯದಲ್ಲಿಯೇ ಸಭೆ ನಡೆಸಿ ತಪ್ಪಾಗಿದ್ದರೆ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗಿರುವವರಿಗೆ ನೆರವಾಗಲು ತಕ್ಷಣವೇ ಪರಿಹಾರದ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಮಾಡುತ್ತೇವೆ ಎಂದು ಮಾಧುಸ್ವಾಮಿ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಸದ್ಯದಲ್ಲೇ ಇದರ ಬಗ್ಗೆ ಆದೇಶ ಹೊರಬೀಳಲಿದೆ ಎಂದು ಪ್ರಶ್ನೆಯೊಂದಕೆ ಸಚಿವರು ಉತ್ತರಿಸಿದರು. ಇದೇ ಸಂದರ್ಭದಲ್ಲಿ ತುಮಕೂರು ನಗರದ ಶಾಸಕರಾದ ಜಿಬಿ ಜ್ಯೋತಿ ಗಣೇಶ್ ಅವರು ಉಪಸ್ಥಿತರಿದ್ದರು

Facebook Comments