ಜೆಡಿಎಸ್ ಭದ್ರಕೋಟೆಯಲ್ಲಿ ಗೆಲುವಿಗೆ ಕೈ-ಕಮಲ ರಾಜಕೀಯ ತಾಲೀಮು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಡಿ.5- ಇದೇ ಡಿ.10 ರಂದು ನಡೆಯುವ ವಿಧಾನ ಪರಿಷತ್ ಮೇಲ್ಮನೆ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಅಭ್ಯರ್ಥಿಗಳಿಗೆ ಹಾಗೂ ಮೂರೂ ರಾಜಕೀಯ ಪಕ್ಷಗಳಿಗೂ ಗೆಲುವಿನದ್ದೇ ಚಿಂತೆಯಾಗಿದೆ. ಗೆಲುವಿಗೆ ಸಂಬಂಧಿಸಿದಂತೆ ಮುಖಂಡರು, ಕಾರ್ಯಕರ್ತರು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಗ್ರಾಮ ಪಂಚಾಯತಿ -ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವವರು ಪಕ್ಷಗಳ ಬೆಂಬಲದಿಂದ ಆಯ್ಕೆಯಾಗಿದ್ದಾರೆ. ಹಾಗಾಗಿ ಈಗ
ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

2015ರಲ್ಲಿ 4159 ಮತದಾರರಿದ್ದರು. ಈ ಬಾರಿ ಸಂಖ್ಯೆ 3617ಕ್ಕೆ ಇಳಿದಿದೆ. 542 ಮತ ಕಡಿಮೆಯಾಗಿದೆ.ಇದು ಕೂಡ ಅಭ್ಯರ್ಥಿಗಳ ಚಿಂತೆಗೆ
ಕಾರಣವಾಗಿದೆ. ಕಳೆದ ಬಾರಿಗಿಂತ ಮತದಾರರು ಕಡಿಮೆಯಾಗಿರುವುದು ಯಾವ ಪಕ್ಷಕ್ಕೆ ಹಿನ್ನಡೆಯಾ ಗುತ್ತದೆ ಎಂಬ ಬಗ್ಗೆಯೂ ವಿಶ್ಲೇಷಣೆಗಳು ಸಾಗಿವೆ. ಇದು ಜೆ.ಡಿ.ಎಸï.ಗೆ ಹೆಚ್ಚು ನಷ್ಟವಾಗಬಹುದು  ಎಂದು ಅಂದಾಜಿಸಲಾಗಿದೆ. ಆದರೆ ಈ ವಾದವನ್ನು ಜೆಡಿಎಸ್ ಕಾರ್ಯ ಕರ್ತರು ಹಾಗೂ ಮುಖಂಡರು ಅಲ್ಲಗಳೆಯುತ್ತಾರೆ. ಈಗಲೂ ಕೂಡ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರ ಬಲವೇ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಬಾರಿ 3000ಕ್ಕೂ ಹೆಚ್ಚುಸದಸ್ಯರ ಬಲವನ್ನು ಜೆಡಿಎಸ್ ಹೊಂದಿತ್ತು. ಆದರೆ ಫಲಿತಾಂಶವೇ ಬೇರೆಯಾಯಿತು, ಎಂ.ಎ.ಗೋಪಾಲ ಸ್ವಾಮಿ ಗೆಲುವಿನ ನಗೆ ಬೀರಿದರು. ಜೆಡಿಎಸ್ ಅಭ್ಯರ್ಥಿ ಪಟೇಲ್ ಶಿವರಾಂ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ಜೆಡಿಎಸ್ ವರಿಷ್ಠ ಹೆಚï.ಡಿ. ದೇವೇಗೌಡರ ಮೊಮ್ಮಗ, ಶಾಸಕ ಹೆಚï.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್ ರೇವಣ್ಣ ಕಣದಲ್ಲಿರುವು ದರಿಂದ ಶತಾಯಗತಾಯ ಅವರನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ಮುಖಂಡರು ಪಣ ತೊಟ್ಟಿರುವಂತಿದೆ.

ಖುದ್ದು ರೇವಣ್ಣ ಹಾಗೂ ಭವಾನಿ ರೇವಣ್ಣ ಅವರೇ ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿಯಾಗುತ್ತಿದ್ದಾರೆ. ಪಂಚಾಯಿತಿಗಳಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ .ಅಲ್ಲದೆ ಭಾರೀ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಇದರಿಂದ ಜೆಡಿಎಸ್ ಗೆ ಹೆಚ್ಚು ಅನುಕೂಲವಾಗುವುದೆಂದು ಕಾರ್ಯಕರ್ತರಲ್ಲಿ ಅಭಿಪ್ರಾಯವಿದೆ.

ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಜೆಡಿಎಸ್‍ಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಮೂಲಕ ಗೆಲುವಿನ ಹಾದಿ ಸುಲಭವಾಗಿಸುತ್ತಿದೆ ಎಂಬ ರಾಜಕೀಯ ಲೆಕ್ಕಾಚಾರವೂ ನಡೆಯುತ್ತಿದೆ.

ಇನ್ನು ಕಾಂಗ್ರೆಸ್ನ ಎಂ.ಶಂಕರ್ ಕೂಡ ಪ್ರಚಾರದಿಂದ ಹಿಂದೆ ಬಿದ್ದಿಲ್ಲ. ಚನ್ನರಾಯಪಟ್ಟಣ ತಾಲ್ಲೂಕನ್ನು ಹೆಚ್ಚು ಕೇಂದ್ರೀಕರಿಸಿರುವಂತಿದೆ. ಪ್ರಚಾರ ಸಭೆಗಳನ್ನೂ ನಡೆಸಿದ್ದಾರೆ. ಆದರೆ ಈ ಚುನಾವಣೆ ಯಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ಪಡೆದು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಾದ ನಂಬಲಾಗದು. ಕಾರಣ ಬಿ. ಶಿವರಾಂ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾದಂತೆ ಕಾಣಸಿಗುತ್ತಿಲ್ಲ.ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಎಂದಿನಂತೆ ಮುಂದುವರೆದಿದ್ದು ಪ್ರಚಾರಕ್ಕೆ ಒಗ್ಗಟ್ಟಿನ ಮಂತ್ರವನ್ನು ಜಪಿಸದೆ ರಾಜಕೀಯ ಮುಂದುವರೆದಿದೆ.

ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಡಿ.ಕೆ ಸುರೇಶ್ ಹಾಗೂ ಧ್ರುವನಾರಾಯಣ್ ಪಕ್ಷದ ಬಲವರ್ಧನೆಗೆ ಹಾಗೂ ಶಂಕರ್ ಅವರ ಗೆಲುವಿಗೆ ಪ್ರಯತ್ನ ಮಾಡುತ್ತಿದ್ದರೂ ಸಹ ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಕಾದು ನೋಡಬೇಕಿದೆ. ಈಗಾಗಲೇ ಡಿ.ಕೆ ಸುರೇಶ್ ಅವರು ಜಿಲ್ಲಾಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಭೆಗಳನ್ನು ಮಾಡುತ್ತಿದ್ದು ಶಂರ್ಕ ಅವರ ಗೆಲುವಿಗೆ ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ಯಾವ ರೀತಿ ಮತವಾಗಿ ಪರಿವರ್ತನೆಯಾಗಲಿದೆ ಎಂಬುದು ಕಾದು ನೋಡಬೇಕಿದೆ.

ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆ ಜನಪ್ರತಿನಿಗಳ ಮೇಲೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಚುನಾವಣಾ ಕಾವು ಏರುವಂತೆ ಮಾಡಲಾಗಿದೆ.
ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿಯ ಲಾಭ ಆಗಲಿದೆ ಎಂಬುದನ್ನು ಚುನಾವಣೆ ನಂತರವಷ್ಟೇ ತಿಳಿಯಬೇಕಿದೆ.

ಇತ್ತೀಚಿಗೆ ಮಾಜಿ ಸಚಿವ ಎ.ಮಂಜು ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು ಇದು ಸಹ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರವೂ ನಡೆಯುತ್ತಿದೆ. ಬಿಜೆಪಿಯ ಎಚ್.ಎಂ.ವಿಶ್ವನಾಥ್ ಪರ ಪ್ರಚಾರ ಆರಂಭವಾಗಿದೆ. ವಿಧಾನಸಭಾ ಕ್ಷೇತ್ರವಾರು ಸಭೆ ಕೂಡ ನಡೆಸುತ್ತಿದ್ದಾರೆ. ಹೋರಾಟದ ನೆಲೆಗಟ್ಟಿನಿಂದ ಬಂದಿದ್ದೇನೆ. ನಾನು ಹಿರಿಯ, ಹಾಗಾಗಿ ಮೇಲ್ಮನೆಗೆ ಕಳುಹಿಸಿ ಎಂದು ಪ್ರಚಾರದ ವೇಳೆ ಮಾತನಾಡುತ್ತಿದ್ದಾರೆ.

ಶಾಸಕರಾಗಿದ್ದ ಸಂದರ್ಭದಲ್ಲಿ ಹಲವು ಹೋರಾಟಗಳನ್ನು ಮಾಡಿರುವ ವಿಶ್ವನಾಥ್ ಅವರು ಹುಟ್ಟು ಹೋರಾಟಗಾರರು. ಈ ಅಂಶವು ಅವರ ಗೆಲುವಿಗೆ ಸಾಥ್ ನೀಡುವ ಸಾಧ್ಯತೆ ಇದೆ. ಆದರೆ ಈಗೇನಿದ್ದರೂ ಸಹ ಹಣ ಬಲದ ಮೇಲೆ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಅಭ್ಯರ್ಥಿ ಎಷ್ಟರಮಟ್ಟಿಗೆ ಸಂಪನ್ಮೂಲ ಒದಗಿಸುವ ಮೂಲಕ ಚುನಾವಣೆ ಗೆಲುವು ಸಾಧಿಸಲಿದ್ದಾರೆ ಎಂಬುದು ನೋಡಬೇಕಿದೆ. ಅಲ್ಲದೆ. ಬಿಜೆಪಿ ಮುಖಂಡರಲ್ಲಿ ಹೊಸ ಹುಮ್ಮಸ್ಸು ಇದ್ದಂತಿಲ್ಲ. ಜಿಲ್ಲಾ ಬಿಜೆಪಿ ಘಟಕ ಈಗ ಒಡೆದ ಮನೆಯಾಗಿದೆ.

ಇತ್ತೀಚೆಗೆ ಅರಸೀಕೆರೆಯಲ್ಲಿ ನಡೆದಂತಹ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ನಡೆದಿದ್ದು ಸಭೆಯಲ್ಲಿ ಈ ರೀತಿ ರಕ್ತ ಚೆಲುವಂತೆ ಕಾರ್ಯಕರ್ತರು ಬಡಿದಾಕೊಂಡಿರುವು ದು ಚುನಾವಣಾ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ.

ಕಾರ್ಯಕರ್ತರು ಹಾಗೂ ಮುಖಂಡರಲ್ಲೇ ಒಗ್ಗಟ್ಟು ಇಲ್ಲದಿರುವುದು ವ್ಯತಿರಿಕ್ತವಾಗಿ ಪರಿಣಾಮ ಬೀರಲಿದ್ದು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಈ ಬೆಳವಣಿಗೆ ಮಾರಕವಾಗಲಿದೆ ಇವೆಲ್ಲೇ ಏನೇ ದ್ದರೂ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿ ಬಿಜೆಪಿ ಕಾರ್ಯಕರ್ತರು ಇರುವಂತಿದೆ. ಆದರೆ ಚುನಾವಣೆ ನಂತರವಷ್ಟೇ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಸಲಿದ್ದಾರೆ ಎಂಬುದು ಖಚಿತವಾಗಲಿದೆ.

ಒಟ್ಟಾರೆ ಈ ಬಾರಿಯ ವಿಧಾನಪರಿಷತ್ ಚುನಾವಣೆ ಸಂಪನ್ಮೂಲ ವ್ಯಕ್ತಿಗಳ ಬಲದಿಂದ ನಡೆಯುತ್ತಿರು ವುದರಿಂದ ಯಾರು ಎಷ್ಟು ಹಣವನ್ನು ಚುನಾವಣೆಯಲ್ಲಿ ವ್ಯಹಿಸಲಿದ್ದಾರೆ ಹಾಗೂ ಸದಸ್ಯರ ಮೇಲೆ ಯಾವ ರೀತಿಯ ಪ್ರಭಾವ ಬೀರುವ ಮೂಲಕ ಅದನ್ನು ಮತವಾಗಿ ಪರಿವರ್ತಿಸಲಿದ್ದಾರೆ ಎಂಬುದನ್ನು ಚುನಾವಣಾ ಫಲಿತಾಂಶದ ನಂತರವಷ್ಟೇ ತಿಳಿಯಲಿದೆ.

ಈಗಾಗಲೇ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಜನಪ್ರತಿನಿಗಳಿಗೆ ಲಕ್ಷ-ಲಕ್ಷ ಹಣದ ಆಮಿಷವನ್ನು ಒಡ್ಡಲಾಗುತ್ತಿದೆ ಅಲ್ಲದೇ ಬಾಡೂಟ- ಪಾರ್ಟಿ -ಪ್ರವಾಸ ಎಂಬ ಆಮಿಷದೊಂದಿಗೆ ಅಭ್ಯರ್ಥಿಗಳು ಮಿಂಚಿನ ಪ್ರಚಾರದಲ್ಲಿ ತೊಡಗಿದ್ದು ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಯಾವ ಅಭ್ಯರ್ಥಿ ಬೆಂಬಲಕ್ಕೆ ಮತದಾರರು ನಿಲ್ಲಲಿದ್ದಾರೆ ಎಂಬುದನ್ನು ಕಾಲವೇ ಉತ್ತರಿಸಲಿದೆ.
#ಸಂತೋಷ್ ಸಿ.ಬಿ, ಹಾಸನ.

Facebook Comments