ಪ್ರವಾಸಕ್ಕೆ ತೆರಳಿದ್ದ ನಗರಸಭಾ ಸದಸ್ಯ-ಜೆಡಿಎಸ್ ಮುಖಂಡ ಅಪಘಾತದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಜ.15- ಕೇರಳದ ಪ್ರವಾಸಿತಾಣಗಳಿಗೆ ಪ್ರವಾಸಕ್ಕೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಹಿರಿಯೂರು ನಗರಸಭೆ ಸದಸ್ಯ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಿರಿಯೂರು ನಗರಸಭೆ ಸದಸ್ಯ ಎ.ಪಾಂಡುರಂಗ (37) ಹಾಗೂ ಐಮಂಗಲ ಹೋಬಳಿಯ ಜೆಡಿಎಸ್ ಮುಖಂಡ ಪ್ರಭಾಕರ್ (52) ಎಂಬುವವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಪಾಂಡುರಂಗ ಮತ್ತು ಪ್ರಭಾಕರ್ ಅವರು ಕಳೆದ ಭಾನುವಾರ ಕೇರಳದ ಪ್ರೇಕ್ಷಣೀಯ ಸ್ಥಳಗಳಿಗೆ ತಮ್ಮ ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು.ಕಳೆದ ರಾತ್ರಿ ತಮ್ಮ ಊರಿಗೆ ವಾಪಸಾಗುವಾಗ ಕೇರಳದ ಮಲಂಪುರ ಬಳಿಯ ಕಡುದಾರಿಯಲ್ಲಿ ಕಾರಿಗೆ ಎದುರಾಗಿ ಬಂದ ಲಾರಿ ಏಕಾಏಕಿ ಗುದ್ದಿದೆ.

ಇದರಿಂದಾಗಿ ಕಾರು ಪಲ್ಟಿಯಾಗಿ ಅದರಲ್ಲಿದ್ದ ಇಬ್ಬರೂ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಜೆಡಿಎಸ್‍ನ ಪ್ರಭಾವಿ ಮುಖಂಡರಾಗಿದ್ದ ಪಾಂಡುರಂಗ ಅವರು ಹಿರಿಯೂರು ನಗರಸಭೆಯ 7ನೆ ವಾರ್ಡ್‍ನಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ್ರಭಾಕರ್ ಕೂಡ ಅವರ ಸ್ನೇಹಿತರಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಜನಸ್ನೇಹಿ ಎಂದು ಹೆಸರು ಪಡೆದಿದ್ದರು.

ಅಪಘಾತವಾಗಿರುವ ಬಗ್ಗೆ ಕೇರಳ ಪೊಲೀಸರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಅವರ ಬೆಂಬಲಿಗರ ಆಕ್ರಂಧನ ಮುಗಿಲು ಮುಟ್ಟಿದೆ.

Facebook Comments

Sri Raghav

Admin