ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು : ಎಚ್.ಕೆ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮಾ.26- ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒಯಿಸಿದ್ದಾರೆ.

ಅಲ್ಲದೆ ಸೊಂಕಿತರೆಂದು ಸಂದೇಹ ಪಟ್ಟು ಕ್ವಾರನ್ಟೈನ್ ಗೆ ಒಳಪಡಿಸುವವರಿಗೂ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ಈ ಸಂಜೆಗೆ ತಿಳಿಸಿದರು. ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು. ಆರೋಗ್ಯಕ್ಕಿಂತಲೂ ಹಬ್ಬ ಮುಖ್ಯವಲ್ಲ ಎಂದ ಅವರು ಪ್ರಾಣಿಬಲಿಯನ್ನು ಕನಿಷ್ಠ ಒಂದು ವಾರವಾದರೂ ನಿಲ್ಲಿಸಬೇಕು.

ಇಂದು ದುಬಾರಿ ಬೆಲೆಗೆ ಮಾಂಸ ಮಾರಾಟ ಮಾಡಿರುವುದು ವರದಿಯಾಗಿದೆ. ಇಂಥ ಸಂದರ್ಭದಲ್ಲಿ ಜನರ ಆರೋಗ್ಯ ಮುಖ್ಯ. ಜನರು ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಬೇಕು. ಲಾಕ್ಡೌನ್ ಮಾಡಿದ್ದರು ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದೆ.

ಹೀಗಾಗಿ ಜನರಲ್ಲಿ ಇನಷ್ಟು ಜಾಗೃತಿ ಮೂಡಿಸಬೇಕು. ದಿನಸಿ, ಔಷಧಿಯಂತಹ ಅಗತ್ಯ ವಸ್ತುಗಳು ಸದಾ ಸಿಗುವಂತೆ ಮಾಡಬೇಕು. ಸಮಯ ನಿಗದಿ ಮಾಡಿದರೆ ಏಕ ಕಾಲಕ್ಕೆ ಹೆಚ್ಚು ಜನರು ಬಂದು ಗುಂಪು ಸೇರುವ ಸಾಧ್ಯತೆ ಇದೆ.

ದಿನಕ್ಕೆ ಎರಡು ಬಾರಿ ರಾಜ್ಯಮಟ್ಟದ ಕಾರ್ಯಪಡೆ ಸಭೆ ಸೇರಿ ಸೂಕ್ತ ಮಾರ್ಗದರ್ಶನ ಮಾಡಬೇಕು.ಸೋಂಕು ಹರಡುವಿಕೆ ತಡೆಯಲು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.

Facebook Comments

Sri Raghav

Admin