ಕಲಾಪದಿಂದ ಹೊರಬಂದು ಜೆಡಿಎಸ್ ಸದಸ್ಯರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.8- ವಿಧಾನಸಭೆ ಪ್ರಶ್ನೋತ್ತರ ಕಲಾಪದ ನಂತರ ರೈತರ ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ಸದಸ್ಯರು ಸದನದಿಂದ ಹೊರನಡೆದರು.

ಕೃಷಿ ಕಾಯ್ದೆ ತಿದ್ದುಪಡಿ ವಿರೋಸಿ ರೈತರು ಇಂದು ಭಾರತ್ ಬಂದ್ ಮತ್ತು ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದು, ತಾವು ಅದಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ ಸದಸ್ಯರು ಸದನದಿಂದ ಹೊರನಡೆದು ವಿಧಾನಸೌಧ ಬಳಿಯ ಗಾಂ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ರೈತರ ಪರ ನಮ್ಮ ಪಕ್ಷವಿದೆ. ರೈತ ವಿರೋ ನೀತಿಗೆ ನಮ್ಮ ವಿರೋಧವೂ ಇದೆ ಎಂದು ಪ್ರತಿಭಟನೆ ವೇಳೆ ಜೆಡಿಎಸ್ ಸದಸ್ಯರು ಹೇಳಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಅನ್ನದಾನಿ, ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ವೀರಭದ್ರಯ್ಯ, ಸುರೇಶ್‍ಗೌಡ, ಮಂಜುನಾಥ್, ಮಾಗಡಿ ಮಂಜು, ಸಿ.ಎಸ್.ಪುಟ್ಟರಾಜು, ವೆಂಕಟ್‍ರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅಪ್ಪಾಜಿಗೌಡ, ತಿಪ್ಪೆಸ್ವಾಮಿ ಮತ್ತಿತರರು ಧರಣಿ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.

Facebook Comments

Sri Raghav

Admin