ಜೆಡಿಎಸ್‍ನ 40 ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್, ಜಿಟಿಡಿ ಹೆಸರು ಮಿಸ್ಸಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ರಾಜ್ಯದ ವಿಧಾನಸಭೆ ಉಪ ಚುನಾವಣೆಗೆ ಜೆಡಿಎಸ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ 40 ಮಂದಿ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಬಂಡೆಪ್ಪ ಕಾಶಂಪೂರ್ ಅವರು ತಾರಾ ಪ್ರಚಾರಕರಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಉಪಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರಿಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ದೊರೆತಿಲ್ಲ.  ಡಿಸೆಂಬರ್ 5ರಂದು 15 ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಶತಾಯ-ಗತಾಯ ಹೋರಾಟ ನಡೆಸಿ ಹೆಚ್ಚಿನ ಸ್ಥಾನ ಗಳಿಸಬೇಕೆಂದು ವರಿಷ್ಠರು ನಿರ್ಧರಿಸಿದ್ದಾರೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ತಾರಾ ಪ್ರಚಾರಕರನ್ನು ಬಳಸಿ ಪ್ರಚಾರ ಕೈಗೊಳ್ಳಲಿದೆ. ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಪಕ್ಷ ಬೆಂಬಲ ಘೋಷಣೆ ಮಾಡಿದೆ.

ತಾರಾ ಪ್ರಚಾರಕರು: ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಲೀಲಾದೇವಿ ಆರ್.ಪ್ರಸಾದ್, ವಿಧಾನಸಭೆ ಉಪಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಶಾಸಕರಾದ ಅನಿತಾ ಕುಮಾರಸ್ವಾಮಿ, ಅನ್ನದಾನಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಎಸ್.ಹೊರಟ್ಟಿ, ಚೌಡರೆಡ್ಡಿ ತೂಪಲ್ಲಿ, ಟಿ.ಎ.ಶರವಣ, ಕಾಂತರಾಜು, ಬಿ.ಎಂ.ಫಾರೂಕ್, ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಎನ್.ಎಚ್.ಕೋನರೆಡ್ಡಿ, ಬಿ.ಬಿ.ನಿಂಗಯ್ಯ,

ವೈ.ಎಸ್.ವಿ.ದತ್ತ, ರಮೇಶ್‍ಬಾಬು, ತಿಮ್ಮರಾಯಪ್ಪ, ಎಚ್.ಸಿ.ನೀರಾವರಿ,ಪಿ.ಆರ್.ಸುಧಾಕರ್‍ಲಾಲ್, ಎಂ.ಟಿ.ಕೃಷ್ಣಪ್ಪ, ಆನಂದ್ ಅಸ್ನೋಟಿಕರ್, ಪಕ್ಷದ ಮುಖಂಡರಾದ ಜಫ್ರುಲ್ಲಾಖಾನ್, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಕೆ.ವಿ.ಅಮರನಾಥ್, ಸಯ್ಯದ್ ಶಫೀವುಲ್ಲಾ, ಆರ್.ಪ್ರಕಾಶ್, ರುತ್ ಮನೋರಮಾ, ವಿಲ್ಸನ್‍ರೆಡ್ಡಿ, ಕೆ.ಎ.ಆನಂದ್ ಅವರು ತಾರಾ ಪ್ರಚಾರಕರಾಗಿದ್ದಾರೆ.

Facebook Comments