ಇದ್ದಕ್ಕಿದ್ದಂತೆ ಹೊತ್ತಿ ಉರಿದ ಜೀಪ್, ತಪ್ಪಿದ ಅವಘಡ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಫೆ.5- ಪಟ್ಟಣದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ನಿಂತಿದ್ದ ಜೀಪೊಂದಕ್ಕೆ ಅಕಸ್ಮಿಕ ಬೆಂಕಿ ತಗುಲಿದ್ದು, ಸಾರ್ವಜನಿಕರ ಸಮಯ ಪ್ರಜ್ಞಾಯಿಂದ ಭಾರೀ ಅನಾಹುತ ತಪ್ಪಿದೆ. ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದ ಬಳಿ ಸ್ಥಳೀಯರೊಬ್ಬರಿಗೆ ಸೇರಿದ ಜೀಪೊಂದು ಸುಮಾರು ತಿಂಗಳಿಂದಲೂ ಅಲ್ಲೆ ನಿಂತಿತ್ತು.

ಅದರ ಪಕ್ಕದಲ್ಲೆ ಮಾರುತಿ ಸ್ವಿಫ್ಟ್ ಡಿಜೈರ್ ಕಾರೊಂದನ್ನು ಪಾರ್ಕಿಂಗ್ ಮಾಡಲಾಗಿತ್ತು. ಸಂಜೆ 6 ಗಂಟೆಯಲ್ಲಿ ಇದ್ದಕ್ಕಿದ್ದಂತೆ ಜೀಪಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಹೆಚ್ಚಾಗುತ್ತಿದ್ದಂತೆ ಅಕ್ಕಪಕ್ಕದ ಜನರು ತಕ್ಷಣ ಸ್ಥಳಕ್ಕಾಗಮಿಸಿ ಪಕ್ಕದಲ್ಲಿದ್ದ ಮಾರುತಿ ಕಾರನ್ನು ದೂರ ಎಳೆದೊಯ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕಸ್ಮಾತ್ ಸಾರ್ವಜನಿಕರು ಬರದಿದ್ದರೆ ಜೀಪಿನಿಂದ ಪಕ್ಕದಲ್ಲೆ ಇದ್ದ ಕಾರು, ಟೆಂಪೋಗೂ ಬೆಂಕಿ ತಗುಲಿ ಅವು ಸಹ ಬೆಂಕಿಗೆ ಅಹುತಿಯಾಗಿ ಸಿಡಿದು ಶ್ರೀ ಅಂಜನೇಯಸ್ವಾಮಿ, ಗಂಗಾಧರೇಶ್ವರ ದೇವಸ್ಥಾನ, ರಾಮಮಂದಿರ, ಕುಮಾರ ಸಮುದಾಯ ಭವನ, ಡಾ.ಶ್ರೀಧರ್ ಮನೆ, ಸರ್ಕಾರಿ ಶಾಲೆಗೂ ಹಾನಿಯಾಗುವ ಸಂಭವವಿತ್ತು. ಸಾರ್ವಜನಿಕರ ಮುಂಜಗ್ರತಾ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ.

Facebook Comments