ಯೋಗಿ, ಕ್ರೇಜಿವಾಲ್,ಭಾಗವತ್ ಹತ್ಯೆಗೆ ಸಂಚು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಲಖನೌ, ಏ.25- ವಿಧ್ವಂಸಕ ಕೃತ್ಯಗಳನ್ನು ಎಸಗಿ ಯೋಧರು ಮತ್ತು ಜನರ ಸಾವು-ನೋವುಗಳಿಗೆ ಕಾರಣರಾಗುತ್ತಿರುವ ಪಾಕಿಸ್ತಾನ ಕೃತಾಪೋಷಿತ ಜೈಷ್-ಎ-ಮೊಹಮ್ಮದ್(ಜೆಇಎಂ ಅಥವಾ ಜೈಷ್) ಉಗ್ರಗಾಮಿ ಸಂಘಟನೆಯ ಭಯೋತ್ಪಾದಕರನ್ನು ಭದ್ರತಾಪಡೆಗಳು ದಮನ ಮಾಡುತ್ತಿದ್ದರೂ ಉಗ್ರರು ಭಯಭೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ.

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನದ ಬಾಲಾಕೋಟ್‍ನ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಸಮಯ ಸಾಧಿಸುತ್ತಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ , ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಟಾರ್ಗೆಟ್ ಮಾಡಿರುವುದಾಗಿ ಜೈಷ್ ಸಂಘಟನೆ ಹೇಳಿದೆ.

ಅಲ್ಲದೆ ಭಾರತದ ಪ್ರಮುಖ ಹಿಂದೂ ದೇವಾಲಯಗಳು ಮತ್ತು ಮಠ-ಮಂದಿರಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದೆ. ಈ ಹಿನ್ನೆಲೆಯಲ್ಲಿ ಅತಿಗಣ್ಯ ವ್ಯಕ್ತಿಗಳು ಮತ್ತು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಬಿಗಿಭದ್ರತೆ ಒದಗಿಸಲಾಗಿದೆ.

ಪಾಕ್ ಉಗ್ರ ಸಂಘಟನೆಯಿಂದ ಪ್ರಕಟಗೊಂಡಿರುವ ಎರಡು ಪ್ರತ್ಯೇಕ ಪತ್ರಗಳಿಂದ ಈ ಮಾಹಿತಿ ಬಹಿರಂಗಗೊಂಡಿದ್ದು, ಪತ್ರದಲ್ಲಿ ತಮ್ಮ ಮುಂದಿನ ಟಾರ್ಗೆಟ್ ಯೋಗಿ ಆದಿತ್ಯನಾಥ್, ಅರವಿಂದ್ ಕೇಜ್ರಿವಾಲ್, ಮೋಹನ್ ಭಾಗವತ್ ಎಂದು ತಿಳಿಸಲಾಗಿದೆ. ಈ ಮಾಹಿತಿಯನ್ನು ಉತ್ತರ ಪ್ರದೇಶ ಪೊಲೀಸರು ನೀಡಿದ್ದಾರೆ.

ಉತ್ತರಪ್ರದೇಶದ ಶಾಮ್ಲಿ ಹಾಗೂ ಉತ್ತರಾಖಂಡ್‍ನ ರೂರ್ಕಿ ರೈಲ್ವೆ ನಿಲ್ದಾಣಗಳಲ್ಲಿ ಜೈಷ್-ಉಗ್ರ ಸಂಘಟನೆಯ ಪತ್ರಗಳು ಲಭ್ಯವಾಗಿದ್ದು, ರೈಲು ನಿಲ್ದಾಣ ಹಾಗೂ ದೇವಾಲಯಗಳನ್ನು ಸ್ಫೋಟಿಸುವುದಾಗಿ ಹೇಳಲಾಗಿದೆ. ಉಗ್ರ ಸಂಘಟನೆಯ ಪತ್ರಗಳು ದೊರೆತ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ