ಕುಖ್ಯಾತ ಜೈಷ್-ಎ-ಮಹಮದ್ ಉಗ್ರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.16- ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ (ಜೆಇಎಂ)ಗೆ ಸೇರಿದ ಕುಖ್ಯಾತ ಭಯೋತಾದಕನೊಬ್ಬನನ್ನು ದೆಹಲಿಯ ವಿಶೇಷ ಪೊಲೀಸ್ ದಳ ಬಂಧಿಸಿದೆ.

ಕುಪ್ರಸಿದ್ಧ ಉಗ್ರ ಬಷೀರ್ ಅಹಮದ್ ಎಂಬಾತನನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ. ಈತನ ಬಂಧನಕ್ಕಾಗಿ ಎರಡು ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದನೆ ದಾಳಿ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಬಿಷೀರ್ ಶಾಮೀಲಾಗಿದ್ದ. ಈತ ಜೆಇಎಂ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಈತ ವಿಧ್ವಂಸಕ ಕೃತ್ಯ ಎಸಗುವ ತಂಡದಲ್ಲೂ ಕ್ರಿಯಾಶೀಲನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಕೆಲವು ಮಹತ್ವದ ಸುಳಿವು ಲಭಿಸಿದ್ದ, ಮತ್ತಷ್ಟು ಜೆಇಎಂ ಉಗ್ರಗಾಮಿಗಳನ್ನು ಬಂಧಿಸಲಾಗುವುದು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

Facebook Comments