ಗುಡ್‍ಫ್ರೈಡೇ ಮೇಲೆ ಕೊರೊನಾ ಕರಾಳ ಛಾಯೆ

ಈ ಸುದ್ದಿಯನ್ನು ಶೇರ್ ಮಾಡಿ

ಜೆರುಸಲೇಂ, ಏ.10- ಮನು ಕುಲದ ಒಳಿತಿಗಾಗಿ ಅಪಾರ ಸೇವೆ ಸಲ್ಲಿಸಿದ ಶಾಂತಿಧೂತ ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನ- ಗುಡ್‍ಫ್ರೈಡೇ ಆಚರಣೆ ಮೇಲೆ ಕಿಲ್ಲರ್ ಕೊರೊನಾ ಛಾಯೆ ಆವರಿಸಿದೆ. ಏಸು ಕ್ರಿಸ್ತನ ಜನ್ಮ ಸ್ಥಳ ಜೆರುಸಲೇಂನ ಬೆಥ್ಲೆಹೇಂ , ವಾಟಿಕನ್ ಸಿಟಿ ಸೇರಿದಂತೆ ಕ್ಯಾಥೋಲಿಕ್ ಕ್ರೈಸ್ತರ ಪಸಿದ್ಧ ಸ್ಥಳಗಳಲ್ಲಿ ಇಂದು ಗುಡ್‍ಫ್ರೈಡೇ ಆಚರಣೆ ನೀರಸವಾಗಿತ್ತು.

ಪ್ರತಿ ವರ್ಷ ಗುಡ್‍ಫ್ರೈಡೇ ಸಂದರ್ಭದಲ್ಲಿ ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ಪ್ರಸಂಗವನ್ನು ಸಾರುವ ಮೆರವಣಿಗೆ ಮತ್ತು ಶಾಂತಿ ಸಂದೇಶದ ಪ್ರಾರ್ಥನಾ ಸಭೆಗಳು ನಡೆಯುತ್ತಿದ್ದವು. ಆದರೆ ಕೊರೊನಾ ಸೋಂಕು ವ್ಯಾಪಿಸಿ ಸಾವು-ನೋವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಬಹುತೇಕ ಎಲ್ಲಾ ಚರ್ಚ್‍ಗಳು ಬಂದ್ ಆಗಿವೆ.

Facebook Comments