50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚೋರನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.22- ನಗರದಲ್ಲಷ್ಟೇ ಅಲ್ಲದೆ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳ ಮುಖ್ಯದ್ವಾರದ ಲಾಕ್ ಒಡೆದು 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಹೊರಬಂದು ಮತ್ತೆ ಕಳ್ಳತನದಲ್ಲಿ ತೊಡಗಿದ್ದ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಬೆಲೆ ಬಾಳುವ 142 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪೀಣ್ಯ ನಿವಾಸಿ ಶ್ರೀನಿವಾಸ್ ಅಲಿಯಾಸ್ ಡೊಳ್ಳ ಸೀನ(42) ಬಂಧಿತ ಆರೋಪಿ. ಈತ ರೂಢಿಗತ ಕನ್ನಗಳವು ಹಳೇ ಆರೋಪಿಯಾಗಿದ್ದು, 17ನೇ ವಯಸ್ಸಿನಲ್ಲೇ ಕಳ್ಳತನ ಮಾಡುವು ದನ್ನು ರೂಢಿಸಿಕೊಂಡು ಪೀಣ್ಯ, ರಾಜಗೋಪಾಲನಗರ, ಆರ್‍ಎಂಸಿಯಾರ್ಡ್, ನಂದಿನಿಲೇಔಟ್, ತುಮಕೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದನು.

ಜೈಲಿನಿಂದ ಹೊರಬಂದು ಹಳೇಛಾಳಿ ಮುಂದುವರೆಸಿದ್ದ ಈತ ಮಾರ್ಚ್ 15ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಹೋಗುತ್ತಿದ್ದಾಗ ರಾಜಾಜಿನಗರ ಠಾಣೆ ಪಿಎಸ್‍ಐ ಅನಿಲ್‍ಕುಮಾರ್ ಮತ್ತು ಸಿಬ್ಬಂದಿ ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಜೇಬಿನಲ್ಲಿ ಚಿನ್ನದ ನೆಕ್ಲೆಸ್ ಪತ್ತೆಯಾಗಿದೆ.

ಈ ಬಗ್ಗೆ ವಿಚಾರಿಸಿದಾಗ ಕಳ್ಳತನ ಮಾಡಿದ್ದು, ಅದನ್ನು ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯ ಬಂಧನದಿಂದ ಬ್ಯಾಡರಹಳ್ಳಿ ಪೆÇಲೀಸ್ ಠಾಣೆಯ ಒಂದು ಕಳವು ಪ್ರಕರಣ ಪತ್ತೆಯಾಗಿದೆ.

Facebook Comments