ಜಾರ್ಖಂಡ್ ಆರೋಗ್ಯ ಸಚಿವರಿಗೂ ಕೊರೋನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಆ.19- ಕೊರೊನಾ ವೈರಸ್ ಸೋಂಕು ಕೇಂದ್ರ ಸಚಿವರು , ಕೆಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮತ್ತು ಸಚಿವರನ್ನು ಕಾಡುತ್ತಲೇ ಇದೆ.

ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತ ಅವರಿಗೂ ಕೋವಿಡ್ -19 ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರು ಈಗ ಚಿಕಿತ್ಸೆಯಲ್ಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ನನಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ನಾನು ಚಿಕಿತ್ಸೆಗೆ ಒಳಗಾಗಿದ್ದೇನೆ. ನನ್ನೊಂದಿಗೆ ಸಂಪರ್ಕ ಬಂದಿರುವ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೆ ಒಳಗಾಗಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ನಿನ್ನೆಯಷ್ಟೇ ಉತ್ತರಪ್ರದೇಶದ ಆರೋಗ್ಯ ಖಾತೆ ರಾಜ್ಯ ಸಚಿವ ಅತುಲ್ ಗರ್ಗ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಟ್ವೀಟ್ ಮಾಡಿರುವ ಸಚಿವರು ತಮಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಪ್ರಸ್ತುತ ನಾನು ಪ್ರತ್ಯೇಕವಾಗಿದ್ದು , ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.ತಮ್ಮ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅತುಲ್ ಗರ್ಗ್ ಸಲಹೆ ಮಾಡಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದ ಕಮಲರಾಣಿ ವರುಣ್ (60) ಆ.2ರಂದು ಕಿಲ್ಲರ್ ಕೊರೊನಾ ರೋಗಕ್ಕೆ ಬಲಿಯಾಗಿದ್ದರು.

ಕೇಂದ್ರ ಆಯುಷ್ (ಆಯುರ್ವೇದ, ಯೋಗ , ಯುನಾನಿ ಮತ್ತು ಸಿದ್ಧ) ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರು ಚಿಕಿತ್ಸೆಯಲ್ಲಿದ್ದಾರೆ.

Facebook Comments

Sri Raghav

Admin