ಪಾಕ್-ಬಾಂಗ್ಲಾ ರಾಷ್ಟ್ರಗೀತೆ ಕಂಠಪಾಠ ಮಾಡುವಂತೆ ಮಕ್ಕಳಿಗೆ ಹೋಂ ವರ್ಕ್ ನೀಡಿದ ಶಿಕ್ಷಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ಜೆಮ್‍ಶಡ್‍ಪುರ,ಜು. 14- ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡುವಂತೆ ಶಿಶುವಿಹಾರದ ಮಕ್ಕಳಿಗೆ ಹೋಮ್ ವರ್ಕ್ ನೀಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಶಿಕ್ಷಕಿಯ ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ತೋರುತ್ತಿದೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿದೆ.

ಜಾರ್ಖಂಡ್‍ನ ಪೂರ್ವ ಸಿಂಘ್ ಭುಂಬ್ ಶಾಲೆಯೊಂದರ ಶಿಕ್ಷಕಿ, ಮಕ್ಕಳಿಗೆ ಬಾಂಗ್ಲಾ ಮತ್ತು ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಕಂಠಪಾಠ ಮಾಡಲು ಹೇಳಿದ್ದು, ಪೋಷಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಆನ್‍ಲೈನ್ ತರಗತಿಗಳ ಸಂದರ್ಭದಲ್ಲಿ ಕಳೆದ ವಾರ ಯುಕೆಜಿ ಮತ್ತು ಎಲ್‍ಕೆಜಿ ವಿದ್ಯಾರ್ಥಿಗಳಿಗಾಗಿ ಶಾಲೆಯ ವಾಟ್ಸಾಪ್ ಗುಂಪಿನಲ್ಲಿನ ರಾಷ್ಟ್ರಗೀತೆಗಳ ಯೂಟ್ಯೂಬ್ ಲಿಂಕ್ ಕಲಿಸಿರುವುದಾಕೆ ಪೂರ್ವ ಸಿಂ ಹಲವಾರು ಪೆÇೀಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‍ನಲ್ಲಿ ಈ ವಿಷಯವನ್ನು ಹೈಲೇಟ್ ಮಾಡಿರುವ ಬಿಜೆಪಿ ವಕ್ತಾರ ಕುನಾಲ್ ಸಾರಂಗಿ , ಮಕ್ಕಳ ಮೇಲೆ ಇವು ಪರಿಣಾಮ ಬೀರುತ್ತದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಎರಡು ಸದಸ್ಯರ ತಂಡವನ್ನು ರಚನೆ ಮಾಡಿ ತನಿಖೆ ನಡೆಸಿ 24 ಗಂಟೆಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.ಪ್ರಾದೇಶಿಕ ಶಿಕ್ಷಣ ಅಧಿಕಾರಿ ಕೇಶವ್ ಪ್ರಸಾದ್ ನೇತೃತ್ವದ ಇಬ್ಬರು ಸದಸ್ಯರ ತಂಡವು ನಡೆಸುವ ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ರವಿಶಂಕರ್ ಶುಕ್ಲಾ ನಿರ್ದೇಶನ ನೀಡಿದ್ದಾರೆ ಎಂದು ಡಿಇಒ ತಿಳಿಸಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳ ಭವಿಷ್ಯವು ಕತ್ತಲೆಯಾಗಿದೆ ಮತ್ತು ಅಸುರಕ್ಷಿತವಾಗಿದೆ, ಇದು ಮನೆಕೆಲಸಕ್ಕಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗೀತೆಗಳನ್ನು ಕಲಿಯಲು ಮಕ್ಕಳನ್ನು ಕೇಳುತ್ತದೆ ಎಂದು ಹೇಳಿದರು.

ಇದು ಶಿಕ್ಷಕಿಯ ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಮಕ್ಕಳು ಪ್ರಚೋದಿಸಲ್ಪಟ್ಟ ಸಂಸ್ಕೃತಿಗೆ ಅನುಗುಣವಾಗಿ ಬೆಳೆಯುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ಅಸಮಾಧಾನ ಹೊರಹಾಕಿದ್ದಾರೆ.

Facebook Comments

Sri Raghav

Admin