ವಾಮಾಚಾರ ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ 6 ಮಂದಿಯ ಭೀಕರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಗುಮ್ಲಾ, ಜು.22- ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ವಾಮಾಚಾರ-ಮಾಟ, ಮಂತ್ರದ ಮೂಢನಂಬಿಕೆಗಳಿಂದ ಸಾವು-ನೋವಿನ ಪ್ರಕರಣಗಳು ಮರುಕಳಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ವಾಮಾಚಾರ ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ನಾಲ್ವರು ಹಿರಿಯ ನಾಗರಿಕರು ಹಾಗೂ ಇಬ್ಬರು ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿ ಸಾಯಿಸಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಗುಮ್ಲಾ ಜಿಲ್ಲಾಯ ನಾಗರ್ ಸಿಸ್ಕರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ಮಾಹಿತಿಯ ಪ್ರಕಾರ 10 ಜನ ಮುಸುಕುಧಾರಿಗಳು ಸಂತ್ರಸ್ತರನ್ನು ಅವರ ಮನೆಯಿಂದ ಹೊರಗೆಳೆದು ಹೊಡೆದು ಹತ್ಯೆ ಮಾಡಿದ್ದಾರೆ. ಮೇಲ್ನೋಟಕ್ಕೆ ವಾಮಾಚಾರದ ಶಂಕೆಯಿಂದ ಈ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಮತ್ತಷ್ಟು ತನಿಖೆಯಾಗಬೇಕಿದ್ದು, ಅಪರಾಧಿಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಛತ್ತೀಸ್‍ಗಢ ಸೇರಿದಂತೆ ಕೆಲವೆಡೆ ವಾಮಾಚಾರಕ್ಕಾಗಿ ಮಕ್ಕಳನ್ನು ಬಲಿ ಕೊಟ್ಟ ಘಟನೆಗಳು ನೆನಪಿರುವಾಗಲೇ ಈ ಹತ್ಯಾಕಾಂಡ ನಡೆದಿದೆ.

Facebook Comments