ದೇಶದ ಉದ್ದಗಲಕ್ಕೂ ಕಬಂಧ ಬಾಹುಗಳ ವಿಸ್ತರಣೆಗೆ ಜೆಎಂಬಿ ಉಗ್ರರ ಯತ್ನ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.14-ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದನೆ ಸಂಘಟನೆಯ ಕಬಂಧಬಾಹುಗಳು ದೇಶಾದ್ಯಂತ ವಿಸ್ತರಣೆಗೆ ಯತ್ನಿಸುತ್ತೀವೆ ಎಂದು ಹೇಳಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಭಾರತದಲ್ಲಿರುವ 125 ಉಗ್ರರ ಬಗ್ಗೆ ವಿವಿಧ ರಾಜ್ಯಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.

ದೆಹಲಿಯಲ್ಲಿಂದು ನಡೆದ ಭಯೋತ್ಪಾದನೆ ನಿಗ್ರಹದಳದ ಎಟಿಎಸ್ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎನ್‍ಐಎ ಮುಖ್ಯಸ್ಥರಲ್ಲಿ ಒಬ್ಬರಾದ ವೈ.ಸಿ.ಮೋದಿ, ಜೆಎಂಬಿ ಚಟುವಟಿಕೆಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಬಿಹಾರ್ ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿದರು.

ಬಾಂಗ್ಲಾ ದೇಶದ ವಲಸಿಗರ ಸೋಗಿನಲ್ಲಿ ಇವರು ಈ ಐದು ರಾಜ್ಯಗಳಿಗೆ ನುಸುಳಿದ್ದಾರೆ ಎಂಬ ಸಂಗತಿಯನ್ನು ಅವರು ತಿಳಿಸಿದರು. ನಾವು ಇಂತಹ ಉಗ್ರರು ಮತ್ತು ಶಂಕಿತರ 125 ಜನರ ಪಟ್ಟಿಯನ್ನು ಸಂಬಂಧಪಟ್ಟ ರಾಜ್ಯಗಳೊಂದಿಗೆ ಹಂಚಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಕರ್ನಾಟಕ ಗಡಿಪ್ರದೇಶದಲ್ಲಿರುವ ಕೃಷ್ಣಗಿರಿ ಬೆಟ್ಟಗಳಲ್ಲಿ ಜೆಎಂಬಿ ಉಗ್ರರು ರಾಕೆಟ್ ಲಾಂಚರ್‍ಗಳ ಪ್ರಯೋಗವನ್ನು ನಡೆಸಿದ್ದಾರೆ ಎಂದು ವೈ.ಸಿ.ಮೋದಿ ತಿಳಿಸಿದರು. ಮ್ಯಾನ್ಮಾರ್‍ನಲ್ಲಿ ರೋಹಿಂಗ್ಯಾ ಮುಸ್ಲಿಂರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಬೌದ್ಧ ದೇಗುಲಗಳ ಮೇಲೆ ದಾಳಿ ನಡೆಸಲು ಬಾಂಗ್ಲಾ ಉಗ್ರರು ಸಂಚುರೂಪಿಸಿದ್ದಾರೆ ಎಂಬ ಸಂಗತಿಯನ್ನು ಅವರು ಬಹಿರಂಗಗೊಳಿಸಿದರು.

Facebook Comments

Sri Raghav

Admin