ಅತಿಹೆಚ್ಚು ಜಾಬ್‍ಕಾರ್ಡ್ ಹೊಂದಿರುವ ರಾಜ್ಯ ಉತ್ತರ ಪ್ರದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ಸೆ.4- ಕೋವಿಡ್ ಸಂಷಕ್ಟದ ಪರಿಸ್ಥಿತಿಯಲ್ಲಿ ಬಡವರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕೇಂದದ ಎಂಎನ್‍ಜಿಆರ್‍ಜಿಇಎ ಯೋಜನೆಯಡಿ 83 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೊಸ ಉದ್ಯೋಗ (ಜಾಬ್) ಕಾರ್ಡ್‍ಗಳನ್ನು ನೀಡಲಾಗಿದ್ದು, ಉತ್ತರಪ್ರದೇಶ ಅತಿ ಹೆಚ್ಚು ಜಾಬ್ ಕಾರ್ಡ್‍ಗಳನ್ನು ಹೊಂದಿರುವ ರಾಜ್ಯವಾಗಿದೆ.

ಮಹಾತ್ಮ ಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‍ಆರ್‍ಇಜಿಎ) ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದು ದೇಶಾದ್ಯಂತದ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ವೇತನ ಉದ್ಯೋಗವನ್ನು ಖಾತರಿಪಡಿಸುತ್ತದೆ.

ಈ ಯೋಜನೆಯಡಿಪ್ರತಿ ಗ್ರಾಮೀಣ ಕುಟುಂಬವು ಉದ್ಯೋಗ ಕಾರ್ಡ್‍ಗೆ ಅರ್ಹವಾಗಿದೆ. ಉತ್ತರ ಪ್ರದೇಶದಲ್ಲಿ 21.09 ಲಕ್ಷ ಹೊಸ ಉದ್ಯೋಗ ಕಾರ್ಡ್‍ಗಳನ್ನು ನೀಡಲಾಗಿದೆ.

ಇದರ ನಂತರ ಬಿಹಾರ 11.22 ಲಕ್ಷ ಕಾರ್ಡ್, ಪಶ್ಚಿಮ ಬಂಗಾಳದಲ್ಲಿ 6.82 ಲಕ್ಷ , ರಾಜಸ್ಥಾನ 6.58 ಲಕ್ಷ ಮತ್ತು ಮಧ್ಯಪ್ರದೇಶ 5.56 ಲಕ್ಷ ಜಾಬ್‍ಕಾರ್ಡ್‍ಗಳನ್ನು ಹೊಂದಿವೆ.

ಎಂಜಿಎನ್‍ಆರ್‍ಇಜಿಎ ನಿಯಮಗಳ ಪ್ರಕಾರ, ಒಂದು ಮನೆಯವರು ಶಾಶ್ವತವಾಗಿ ನಗರ ಪ್ರದೇಶಗಳಿಗೆ ಅಥವಾ ಇನ್ನೊಂದು ಗ್ರಾಮ ಪಂಚಾಯಿತಿಗೆ ವಲಸೆ ಬಂದಿದ್ದರೆ ಮಾತ್ರ ಜಾಬ್ ಕಾರ್ಡ್ ರದ್ದುಗೊಳಿಸಬಹುದು.

ಕಾರ್ಡ್ ನಕಲಿ ಎಂದು ಸಾಬೀತಾದರೆ ಅಥವಾ ನಕಲಿ ದಾಖಲೆಗಳ ಆಧಾರದ ಮೇಲೆ ನೋಂದಾಯಿಸಲಾಗಿದ್ದರೆ ಅದನ್ನು ರದ್ದುಗೊಳಿಸಬಹುದು.

Facebook Comments

Sri Raghav

Admin