ಎನ್.ಪಿ.ಡಿ.ಸಿ.ಎಸ್/ಎನ್.ಪಿ.ಎಚ್.ಸಿ.ಇ ಕಾರ್ಯಕ್ರಮದಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ ಜು.18- ಎನ್.ಪಿ.ಡಿ.ಸಿ.ಎಸ್/ಎನ್.ಪಿ.ಎಚ್.ಸಿ.ಇ ಕಾರ್ಯಕ್ರಮದಡಿಯಲ್ಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ರಾಷ್ಟೀಯ ಆರೋಗ್ಯ ಅಭಿಯಾನದ ಷರತ್ತು ಮತ್ತು ನಿಬಂಧನೆಗೊಳಪಟ್ಟು ಆಯ್ಕೆ ಮಾಡಲು 40 ವರ್ಷ ಮೀರದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೈದ್ಯರು (ಜನರಲ್‍ಫಿಜಿಶಿಯನ್) ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಬಿಬಿಎಸ್ ಅಥವಾ ತತ್ಸಮಾನ ಪದವಿ ಒಟ್ಟು 21 ಹುದ್ದೆ, ಫಿಜಿಯೋಥೆರಪಿಸ್ಟ್ 1 ಹುದ್ದೆ ಮತ್ತು ಶುಶ್ರೂಷಕಿ(ಕರ್ನಾಟಕ ವೈದ್ಯಕೀಯ ಮಂಡಳಿ ನೋಂದಣಿಯೊಂದಿಗೆ ನರ್ಸಿಂಗ್‍ನಲ್ಲಿ ಪದವಿ / ಡಿಪ್ಲೊಮಾ ) 1 ಹುದ್ದೆ ಮತ್ತು ಕೌನ್ಸಲರ್(ಸಾಮಾಜಿಕ ವಿಜ್ಞಾನದಲ್ಲಿ ಪದವಿ ಅಥವಾ ಕೌನ್ಸೆಲಿಂಗ್ / ಆರೋಗ್ಯ ಶಿಕ್ಷಣ / ಸಾಮೂಹಿಕ ಸಂವಹನದಲ್ಲಿ ಪದವಿ / ಡಿಪ್ಲೊಮಾ) 2 ಹುದ್ದೆ ಇರುವುದರಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಎಲ್ಲ ಧೃಡೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ಜು.31ರ ಸಂಜೆ4 ಗಂಟೆ ಒಳಗಾಗಿ ಈ ಕಚೇರಿಗೆ ಸಲ್ಲಿಸುವುದು.

ವಿಳಾಸ: ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, 2ನೇ ಮಹಡಿ ಸಾಲಗಾಮೆ ರಸ್ತೆ, ಹಾಸನ. ದೂ: 08172-245110 ಈ ವಿಳಾಸಕ್ಕೆ ಎರಡು ವರ್ಷ ಅನುಭವ, ವಿದ್ಯಾರ್ಹತೆ ಮೀಸಲಾತಿ ಆದ್ಯತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾರ್ಯಲಯದ ಅವಧಿಯಲ್ಲಿ ಸಂಪರ್ಕಿಸಬಹುದು.

Facebook Comments