ನಾನು ಅಮೆರಿಕ ಅಧ್ಯಕ್ಷನಾದರೆ ಭಾರತಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ : ಜೋ ಬಿಡೆನ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.2- ತಾವು ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದರೆ ಭಾರತಕ್ಕೆ ಹೆಚ್ಚು ಆದ್ಯತೆ ಮತ್ತು ಪ್ರಾಶಸ್ತ್ಯ ನೀಡುವುದಾಗಿ ಡೆಮೆಕ್ರಾಟ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ನ.3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಚುನಾವಣೆಗೆ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಪ್ರಬಲ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಿರುವ ಜೋ ಬಿಡೆನ್ ಮೊದಲಿನಿಂದಲೂ ಭಾರತದ ಪರ ವಿಶೇಷ ಒಲವು ಉಳ್ಳವರು.

ವಾಷಿಂಗ್ಟನ್‍ನಲ್ಲಿ ನಡೆದ ಚುನಾವಣಾ ನಿಧಿ ಕ್ರೋಢೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕಕ್ಕೆ ಭಾರತ ಸ್ವಾಭಾವಿಕ ಮಿತ್ರ ರಾಷ್ಟ್ರವಾಗಿದೆ. ತಾವು ನವೆಂಬರ್ ಚುನಾವಣೆಯಲ್ಲಿ ವಿಜೇತರಾದರೆ ಅಮೆರಿಕ-ಭಾರತ ನಡುವಣ ಮಹತ್ವದ ಸಂಬಂದ ಮತ್ತಷ್ಟು ಬಲಗೊಳ್ಳಲಿದೆ. ಭಾರತಕ್ಕೆ ಹೆಚ್ಚಿನ ಆದ್ಯತೆ ತಮ್ಮ ಆಡಳಿತದ ಪ್ರಾಶಸ್ತ್ಯವಾಗಲಿದೆ ಎಂದರು.

ಕೋವಿಡ್ ವೈರಸ್, ಜನಾಂಗೀಯ ಗಲಭೆ ನಿಯಂತ್ರಣದಲ್ಲಿ ಟ್ರಂಪ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಬಿಡೆನ್, ತಾವು ಚುನಾವಣೆಯಲ್ಲಿ ಜಯಸಾಧಿಸಿದರೆ, ಎಚ್-1ಬಿ ವೀಸಾ ರದ್ದತಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು.

Facebook Comments