ನಾಯಿ ಜತೆ ಆಟವಾಡುವಾಗ ಕಾಲು ಉಳುಕಿಸಿಕೊಂಡ ಬೈಡೆನ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ನ.30- ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಅವರು ತಮ್ಮ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಲು ಉಳುಕಿಸಿಕೊಂಡಿದ್ದಾರೆ. ನಾಯಿಯೊಂದಿಗೆ ಆಟವಾಡುತ್ತಿದ್ದಾಗ ಪಾದ ಟ್ವಿಸ್ಟ್ ಆದ ಹಿನ್ನಲೆಯಲ್ಲಿ ಬೈಡೇನ್ ಅವರ ಪಾದಕ್ಕೆ ಏರ್‍ಪ್ರಾಕ್ಚರ್ ಆಗಿದ್ದು, ಕೆಲವು ವಾರಗಳ ಕಾಲ ವಾಕಿಂಗ್ ಬೂಟ್ ಧರಿಸಿ ಓಡಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೈಡೇನ್ ಅವರು ಎರಡು ಜರ್ಮನ್ ಶೆಪ್ಪರ್ಡ್ ನಾಯಿಗಳನ್ನು ಸಾಕಿದ್ದು, ಒಂದು ನಾಯಿಯೊಂದಿಗೆ ಆಟವಾಡುತ್ತಿದ್ದಾಗ ಸ್ಲೀಪ್ ಆಗಿದ್ದರೂ ಹೆಚ್ಚಿನ ತಪಾಸಣೆ ನಡೆಸಿದಾಗ ಏರ್‍ಪ್ರಾಕ್ಚರ್ ಆಗಿರುವುದು ದೃಢಪಟ್ಟಿದೆ ಎಂದು ವೈದ್ಯ ಓ ಕಾರ್ನರ್ ತಿಳಿಸಿದ್ದಾರೆ.

ಹೀಗಾಗಿ ಬೈಡೇನ್ ಅವರು ಇಂದಿನಿಂದ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments