ಅಮೆರಿಕ ಅಧ್ಯಕ್ಷೀಯ ಚುನಾವಣೆ : ಬಿಡೆನ್, ಕಮಲಾ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತ ಸಂಜಾತೆಯ ಜನ್ಮಮೂಲ ಕೆದಕುತ್ತಿರುವ ರಿಪಬ್ಲಿಕನ್ ಮುಖಂಡರು  ವಾಷಿಂಗ್ಟನ್, ಆ.14-ಕೊರೊನಾ ವೈರಸ್ ಹಾವಳಿ ನಡುವೆಯೂ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ರಂಗೇರತೊಡಗಿದೆ.

ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರ್ಸಸಿರುವ ಜೋ ಬಿಡೆನ್ ಹಾಗೂ ಭಾರತ ಸಂಜಾತೆ ಮತ್ತು ಪ್ರಭಾವಿ ಮಹಿಳೆ ಕಮಲಾ ದೇವಿ ಹ್ಯಾರಿಸ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಈ ಮಧ್ಯೆ ಕಮಲಾ ಹ್ಯಾರಿಸ್ ಜನಪ್ರಿಯತೆಯಿಂದ ವಿಚಲಿತಗೊಂಡ ರಿಪಬ್ಲಿಕನ್ ಪಾಟಿ ಅವರ ಜನ್ಮ ಮೂಲವನ್ನು ಕೆದಕುತ್ತಾ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.

ಬಿಡೆನ್ ಮತ್ತು ಕಮಲಾ ಅಕೃತ ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ದಾಖಲೆ ಪತ್ರಗಳಿಗೆ ಇಂದು ಸಹಿ ಹಾಕಿ ಉಮೇದುವಾರಿಕೆ ಸಲ್ಲಿಸಲಿದ್ಧಾರೆ. ಮತ್ತೊಮ್ಮೆ ಅಧ್ಯಕ್ಷ ಹುದ್ದೆಗೇರಲು ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು ಸಹ ರಿಪಬ್ಲಿಕನ್ ಪಕ್ಷದಿಂದ ಸ್ರ್ಪಸಲು ತಮ್ಮ ನಾಮಪತ್ರ ಸಲ್ಲಿಸಲಿದ್ದು, ಈ ಸಂಬಂಧ ಶ್ವೇತಭವನದಲ್ಲಿ ಭಾಷಣ ಮಾಡಲಿದ್ದಾರೆ.

ಡೆಮಾಕ್ರೆಟಿಕ್ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗುತ್ತಿದ್ದಂತೆ, ವಿಶ್ವದ ಮಹಾ ಶಕ್ತಿಶಾಲಿ ದೇಶದಲ್ಲಿ ಮಿಂಚಿನ ಸಂಚಾರದ ಸಂಚಲನವಾಗಿದೆ.

ಇದೇ ವೇಳೆ ಸಂಸದೆ ಕಮಲಾ ಹ್ಯಾರಿಸ್ ಜನ್ಮದ ಮೂಲವನ್ನು ಅವರ ವಿರೋಗಳು ಕೆದಕಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಟ್ರಂಪ್ ಸೇರಿದಂತೆ ರಿಪಬ್ಲಿಕನ್ ಪಕ್ಷದ ಮುಖಂಡರು ಕಮಲಾ ಅಮೆರಿಕ ಮೂಲದವರಲ್ಲ. ಅವರು ದೇಶದ ಉಪಾಧ್ಯಕ್ಷರಾಗಲು ಅರ್ಹರಲ್ಲ ಎಂದು ಆರೋಪಿಸುತ್ತಿದ್ದಾರೆ.

ಬರಾಕ್ ಒಬಾಮಾ ಅವರು ಅಧ್ಯಕ್ಷ ಸ್ಥಾನಕ್ಕೆ ಸರ್ದಿಸಿದ್ದಾಗಲೂ ಅವರ ಜನ್ಮದ ಮೂಲವನ್ನು ವಿರೋಗಳು ಕೆದಕಿ ವಿವಾದ ಸೃಷ್ಟಿಸಿದ್ದರು.

Facebook Comments

Sri Raghav

Admin