‘ನಾನು ಅಧ್ಯಕ್ಷನಾದರೆ ಭಾರತಕ್ಕೆ ಎಲ್ಲ ರೀತಿಯ  ಬೆಂಬಲ’ : ಬಿಡೆನ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.16- ತಾವು ಅಮೆರಿಕಾ ಅಧ್ಯಕ್ಷರಾಗಿ ಚುನಾಯಿತರಾದರೆ ಪ್ರಸ್ತುತ ಭಾರತ ಎದುರಿಸುತ್ತಿರುವ ಸಮಸ್ಯೆ ಸಂಘರ್ಷ ಮತ್ತು ಸವಾಲುಗಳನ್ನು ನಿಭಾಯಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ.

ಭಾರತವು ಈಗ ಅನೇಕ ಸಮಸ್ಯೆ ಮತ್ತು ಸಂಘರ್ಷಗಳನ್ನು ಎದುರಿಸುತ್ತಿದೆ. ನೆರೆ ಹೊರೆ ರಾಷ್ಟ್ರಗಳಿಂದ ಆತಂಕಕ್ಕೂ ಕೂಡ ಒಳಪಟ್ಟಿದೆ. ತಾವು ಅಮೆರಿಕಾ ಅಧ್ಯಕ್ಷರಾದರೆ ಇವೆಲ್ಲವನ್ನು ಎದುರಿಸಲು  ಭಾರತಕ್ಕೆ ಒತ್ತಾಸೆಯಾಗಿ ನಿಲ್ಲುವುದಾಗಿ ಬಿಡೆನ್ ಹೇಳಿದರು.

ಚುನಾವಣಾ ನಿಮಿತ್ತ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಬಿಡೆನ್ ತಾವು ಅಮೆರಿಕಾ ಅಧ್ಯಕ್ಷರಾದರೆ ಭಾರತೀಯರಿಗೆ ಈಗ ಎದುರಾಗಿರುವ ಎಚ್1 ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ಘೋಷಿಸಿದರು.

ಭಾರತ ಮತ್ತು ಅಮೆರಿಕಾ ಒಗ್ಗೂಡಿದರೆ ಈ ವಿಶ್ವದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಎದುರಾಗುವ ಯಾವುದೇ ತೊಂದರೆಗಳನ್ನು ಈ ಎರಡು ರಾಷ್ಟ್ರಗಳು ಬಗೆಹರಿಸುತ್ತಿವೆ ಎಂದು ಅಧ್ಯಕ್ಷೆ ಅಭ್ಯರ್ಥಿ ವಿಶ್ವಾಸದಿಂದ ನುಡಿದರು.

ಭಾರತದೊಂದಿಗೆ ವಾಣಿಜ್ಯ ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಯಾಗಲು ತಾವು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ನನಗೆ ಭಾರತದ ಬಗ್ಗೆ ಮೊದಲಿನಿಂದಲೂ ಬಹಳ ಗೌರವ ಮತ್ತು ಒಲವು ಇದೆ. 15 ವರ್ಷಗಳ ಹಿಂದೆ ಭಾರತದಲ್ಲಿ ಪರಮಾಣು ಒಪ್ಪಂದ ಜಾರಿಗೆ ನಾನು ಮಹತ್ವದ ಪಾತ್ರ ವಹಿಸಿದ್ದೆ. ನನ್ನ ಬಗ್ಗೆಯೂ ಭಾರತಕ್ಕೆ ಅಭಿಮಾನವಿದೆ. ನಾನು ಅಧ್ಯಕ್ಷನಾದರೆ ಎರಡು ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಅವರು ಹೇಳಿದರು.

ಉಪಾಧ್ಯಕ್ಷೆ ಅಭ್ಯರ್ಥಿ , ಭಾರತ ಸಂಜಾತೆ ಕಮಲಾ ದೇವಿ ಹ್ಯಾರಿಸ್ ಮಾತನಾಡಿ, ಏಷ್ಯಾ ಖಂಡದಿಂದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ರ್ಪಸುತ್ತಿರುವ ಪ್ರಥಮ ವ್ಯಕ್ತಿ ಎಂಬ ಹೆಮ್ಮೆ ನನಗಿದೆ. ಎಲ್ಲಕ್ಕಿಂತ ಮಿಗಿಲಾಗಿ ನಾನು ಭಾರತೀಯ ಮೂಲದವಳು ಎಂಬ ಸಂತಸ ಇದೆ ಎಂದು ಹೇಳಿದರು.

Facebook Comments

Sri Raghav

Admin