ಅಮೆರಿಕಾ ಅಧ್ಯಕ್ಷರು ತಪ್ಪು ತಿಳುವಳಿಕೆಯಲ್ಲಿದ್ದಾರೆ: ಎಲೋನ್ ಮಸ್ಕ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 13- ಶ್ರೀಮಂತ ಉದ್ಯಮಿ ಹಾಗೂ ಟ್ವಿಟರ್ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ಒಡೆತನಕ್ಕೆ ಧಕ್ಕಿಸಿಕೊಂಡ ಎಲೋನ್ ಮಾಸ್ಕ್ ಅವರ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕಾವನ್ನು ಪರಿವರ್ತನೆ ಮಾಡಲು ಜನ ತಮ್ಮನ್ನು ಚುನಾಯಿಸಿದ್ದಾರೆ ಎಂದು ಭಾವಿಸಿ ಅಧ್ಯಕ್ಷ ಜೋ ಬಿಡೇನ್ ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಅಸಲಿಗೆ ಪ್ರತಿಯೊಬ್ಬರು ಕಡಿಮೆ ನಾಟಕವನ್ನು ಬಯಸಿದ್ದರು ಎಂದು ಮಸ್ಕ್ ಟ್ವೀಟ್ ಮಾಡಿ ರಾಜಕಾರಣವನ್ನು ಲೇವಡಿ ಮಾಡಿದ್ದಾರೆ.

ಈ ಹಿಂದೆ ಅಮೆರಿಕಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆದು ಅಧ್ಯಕ್ಷರಾಗಿದ್ದ ಡೋನಾಲ್ಡ್ ಟ್ರಂಪ್ ಹಿನ್ನೆಡೆ ಅನುಭವಿಸಿದ್ದರು. ಜೋ ಬಿಡೇನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಸ್ಕ್ ಅವರ ಟ್ವೀಟ್‍ನಿಂದ ಟ್ರಂಪ್ ಮಹಾನ್ ನಾಟಕೀಯ ವ್ಯಕ್ತಿ ಎಂಬ ಲೇವಡಿ ವ್ಯಕ್ತವಾಗಿದೆ. ಜೊತೆಗೆ ಬಿಡೇನ್ ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಅಸಮದಾನವೂ ಪರೋಕ್ಷವಾಗಿ ವ್ಯಕ್ತವಾಗಿದೆ.

ಮುಂದುವರೆದ ಟ್ವೀಟ್‍ನಲ್ಲಿ 2024ರ ಚುನಾವಣೆಯಲ್ಲಿ ಕನಿಷ್ಠ ಕಡಿಮೆ ವಿಭಜನೆಯ ಅಭ್ಯರ್ಥಿ ಉತ್ತಮ ಎಂದು ನನಗೆ ಅನಿಸುತ್ತಿದೆ. ಏನೇ ಆದರೂ ಟ್ರಂಪ್ ಅವರು ಟ್ವೀಟರ್ ಖಾತೆಯನ್ನು ಮರುಚಾಲನೆಗೊಳಿಸುವುದು ಸೂಕ್ತ. ಮಾಹಿತಿಯನ್ನು ತಪ್ಪಿಸಿಕೊಳ್ಳಬೇಡಿ ಎಂದು ಮಸ್ಕ್ ಹೇಳಿದ್ದಾರೆ.

ಚುನಾವಣೆ ಫಲಿತಾಂಶದ ಬಳಿಕ ಟ್ರಂಪ್ ತಮ್ಮ ಬೆಂಬಲಿಗರನ್ನು ಪ್ರಚೋದಿಸಲು ಟ್ವೀಟ್ ಖಾತೆಯನ್ನು ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ ಕಾರಣಕ್ಕೆ ಟ್ವೀಟರ್ ಸಂಸ್ಥೆ ಟ್ರಂಪ್ ಖಾತೆಯನ್ನು ಅಮಾನತು ಮಾಡಿತ್ತು. ಅಂದಿನಿಂದ ಟ್ರಂಪ್ ಟ್ವಿಟರ್‍ನಿಂದ ದೂರ ಉಳಿದಿದ್ದಾರೆ.

Facebook Comments