ಭಾರತ- ಪಾಕ್ ಸರಣಿ ನಡೆಸಲು ಪ್ರಯತ್ನಿಸುವೆ : ಗ್ರೆಗರ್

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಡಿ.1- ಹೈವೋಲ್ಟೇಜ್ ಪಂದ್ಯಗಳೆಂದೇ ಬಿಂಬಿಸಿಕೊಂಡಿದ್ದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸರಣಿ ನಡೆಸಲು ಪ್ರಯತ್ನಿಸುತ್ತೇನೆ ಎಂದು ಐಸಿಸಿ ನೂತನ ಅಧ್ಯಕ್ಷ ಗ್ರೆಗರ್ ಜಾನ್ ಬಾಕ್ರ್ಲೇ ಹೇಳಿದ್ದಾರೆ. ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾತರಿಸುವಂತೆ ನಾನು ಕೂಡ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸರಣಿಯನ್ನು ಆಯೋಜಿಸಲು ಉತ್ಸುಕನಾಗಿದ್ದು ಇದಕ್ಕಾಗಿ ನಾನು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಏಷ್ಯಾ ತಂಡದ ಪ್ರಮುಖ ತಂಡಗಳೆನಿಸಿಕೊಂಡಿರುವ ಕ್ರಿಕೆಟ್ ಸರಣಿಗಳು ಯಾವಾಗಲೂ ಎರಡು ದೇಶಗಳ ರಾಜಕಾರಣಿಗಳ ಇರಾಶೆ ಮೇರೆಗೆ ನಡೆಯುತ್ತವೆ, ಅದಕ್ಕಾಗಿ ದಶಕ ಕಳೆದರೂ ಎರಡು ತಂಡಗಳ ನಡುವೆ ಪರಸ್ಪರ ಸರಣಿ ಆಯೋಜಿಸಲು ಸಾಧ್ಯವಾಗಿಲ್ಲ. ಅಲ್ಲದೆ ಎರಡು ತಂಡಗಳು ಟೆಸ್ಟ್ ಸರಣಿ ಆಡಿ 13 ವರ್ಷಗಳೇ ಕಳೆದು ಹೋಗಿವೆ ಎಂದು ಗ್ರೆಗ್ ತಿಳಿಸಿದರು.

2007 ರಲ್ಲಿ ಪಾಕಿಸ್ತಾನದಲ್ಲಿ ನಡೆದ 3 ಟೆಸ್ಟ್ ಸರಣಿಗಳ ನಂತರ ಭಾರತ ಆ ನೆಲದಲ್ಲಿ ಆಡಿದ ನಿದರ್ಶನಗಳಿಲ್ಲ, ಅದೇ ರೀತಿ ಪಾಕಿಸ್ತಾನ 2012ರಲ್ಲಿ ಭಾರತದಲ್ಲಿ ಏಕದಿನ ಹಾಗೂ ಟ್ವೆಂಟಿ-20 ಸರಣಿ ಆಡಿದ ನಂತರ 2016ರಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‍ನಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದವು.

ಐಸಿಸಿ ಮಂಡಳಿ ಸದಸ್ಯರು, ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳ ರಾಜಕೀಯ ಮುಖಂಡರೊಂದಿಗೆ ಚರ್ಚಿಸಿ ಎರಡು ದೇಶಗಳ ನಡುವೆ ಸರಣಿ ಆಯೋಜಿಸಲು ಪ್ರಯತ್ನಿಸುತ್ತೇನೆ ಎಂದು ಗ್ರೆಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಚುಟುಕು ವಿಶ್ವಕಪ್ ಹಾಗೂ 2023ರಲ್ಲಿ ನಡೆಯಲಿರುವ ಸೀಮಿತ ಓವರ್‍ಗಳ ವಿಶ್ವಕಪ್‍ಗಾಗಿ ಪಾಕಿಸ್ತಾನ ತಂಡವು ಭಾರತಕ್ಕೆ ಬರುವ ನಿರೀಕ್ಷೆಯಿದೆ.

Facebook Comments