ಜೈಲಿನಲ್ಲಿದ್ದ ಮೆಕಾಫೀ ಆಂಟಿ ವೈರಸ್ ಸೃಷ್ಟಿಕರ್ತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಡ್ರಿಡ್,ಜೂ.24-ಮ್ಯಕಾಫೆ (McAfee) ಆಂಟಿ ವೈರಸ್ ಸಾಫ್ಟ್‍ವೇರ್ ಸೃಷ್ಟಿಕರ್ತ ಜಾನ್ ಮ್ಯಕಾಫೆ ಸ್ಪ್ಯಾನಿಶ್ ಬಂಧೀಖಾನೆಯಲ್ಲಿ ಸಾವನ್ನಪ್ಪಿದ್ದಾರೆ. ತೆರಿಗೆ ವಂಚನೆ ಆರೋಪದ ಪ್ರಕರಣದ ವಿಚಾರಣೆ ಎದುರಿಸಲು ಜಾನ್ ಮ್ಯಕಾಫೆ ಅವರನ್ನು ಅಮೆರಿಕಾಕ್ಕೆ ಹಸ್ತಾಂತರಿಸುವಂತೆ ಸ್ಪ್ಯಾನಿಶ್ ನ್ಯಾಯಾಲಯ ಆದೇಶ ನೀಡಿದ ಕೆಲವೆ ಗಂಟೆಗಳಲ್ಲಿ ಬಾರ್ಸಿಲೋನಾ ಬಂಧಿಖಾನೆಯಲ್ಲಿದ್ದ ಮೆಕಾಫಿ ಅವರು ಮೃತಪಟ್ಟಿದ್ದಾರೆ.

ಜೈಲಿನ ಭದ್ರತಾ ಸಿಬ್ಬಂದಿಗಳು ಮ್ಯಕಾಫೆ ಅವರ ಪ್ರಾಣ ಉಳಿಸಲು ಯತ್ನಿಸಿದರು ಯಾವುದೇ ಪ್ರಯೋಜನವಾಗದೆ ಅವರು ಮೃತಪಟ್ಟಿದ್ದಾರೆ ಎಂದು ಬಂಧೀಖಾನೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

Facebook Comments