ಹೆಚ್‍ಐವಿ ಮತ್ತು ಟ್ಯುಬರ್‍ಕ್ಯುಲೋಸಿಸ್ ನಿವಾರಣೆಗೆ ಜಾಗತಿ ಶ್ರಮ: ಜಾನ್ಸನ್ ಅಂಡ್ ಜಾನ್ಸನ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, -ಮುಂಬರುವ 2030ರ ವೇಳೆಗೆ ಹೆಚ್‍ಐವಿ ಮತ್ತು ಟ್ಯುಬರ್‍ಕ್ಯುಲೋಸಿಸ್ ನಿವಾರಣೆಗೆ ಜಾಗತಿ ಶ್ರಮಗಳನ್ನು ಪ್ರಚೋದಿಸುವ ಸಲುವಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ವಿಶ್ವಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಕ್ಕೆ 500 ದಶಲಕ್ಷ ಡಾಲರ್ ಮೀಸಲಿಡಲು ತಾನು ಬದ್ಧವಾಗಿರುವುದಾಗಿ ಜಾನ್ಸನ್ ಅಂಡ್ ಜಾನ್ಸನ್ ಘೋಷಿಸಿದೆ.

ವಿಶ್ವದ ಅತಿ ದೊಡ್ಡ ಆರೋಗ್ಯ ಸಂಸ್ಥೆಯಾಗಿ ಜಾನ್ಸನ್ ಅಂಡ್ ಜಾನ್ಸನ್ ಜಾಗತಿಕ ಆರೋಗ್ಯ ನಾವೀನ್ಯತೆಯಲ್ಲಿ ನಿಕಟವಾಗಿ ತೊಡಗಿದ್ದು, ಸರ್ಕಾರಗಳೊಂದಿಗೆ ಮತ್ತು ಕಾರ್ಯತಾಂತ್ರಿಕ ಪಾಲುದಾರರೊಂದಿಗೆ ಶ್ರಮಿಸಿದೆ. ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವ ಸವಾಲನ್ನು ಯಾವುದೇ ಒಂದು ಸಂಸ್ಥೆಯು ಪರಿಹರಿಸಲಾಗದು ಎಂದು ಉಪಸಭಾಪತಿ, ಕಾರ್ಯಕಾರಿ ಸಮಿತಿ ಮತ್ತು ಪ್ರಧಾನ ವೈಜ್ಞಾನಿಕಾಧಿಕಾರಿ ಪಾಲ್ ಜಾನ್ಸನ್ ತಿಳಿಸಿದ್ದಾರೆ.

ತಂತ್ರಜ್ಞಾನಗಳನ್ನು ಮುಂದುವರಿಸುವ ಮೂಲಕ ಅತ್ಯುತ್ತಮ ವಿಜ್ಞಾನಗಳನ್ನು ಒಟ್ಟುಗೂಡಿಸಿ ಹೆಚ್‍ಐವಿ ಮಠಿತ್ತು ಟಿಬಿಗಳಲ್ಲಿ ನಮಗಿರುವ ದಶಕಗಳ ಅನುಭವದ ಲಾಭ ಪಡೆದುಕೊಂಡು ಜಾಗತಿಕ ಪರಿಶ್ರಮಕ್ಕೆ ಗಣನೀಯವಾಗಿ ಕೊಡುಗೆ ನೀಡಬಹುದು ಎಂಬ ವಿಶ್ವಾಸ ನಮಗಿದೆ ಎಂದರು.

Facebook Comments