ಹೀಗೆ ಬಿಟ್ರ ಬಿಜೆಪಿಯವರು ಸದನದಲ್ಲಿ ಮದುವೆ, ಮುಂಜಿನೂ ಮಾಡ್ತಾರೆ : ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25- ವಿಧಾನಮಂಡಲದ ಜಂಟಿ ಅದಿವೇಶನದ ವಿರುದ್ಧ ತೀವ್ರ ಅಸಮಧಾನ ವ್ಯಕ್ತ ಪಡಿಸಿರುವ ಕಾಂಗ್ರೆಸ್, ಪ್ರಜಾಪ್ರಭುತ್ವದ ಮೌಲ್ಯ ಅರಿಯದ ಬಿಜೆಪಿ ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಯಂತಹ ಸಮಾರಂಭಗಳಿಗೆ ಬಾಡಿಗೆ ಕೊಡಬಹುದು ಎಂದು ಟೀಕಿಸಿದೆ.

ಟ್ವಿಟ್‍ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಕಾಂಗ್ರೆಸ್ ಮೊದಲು ಬಿಜೆಪಿ ಪಕ್ಷವನ್ನು ಉದ್ದೇಶಿಸಿ ಟೀಕೆ ಮಾಡಿದ್ದು, ನಂತರ ವಿಧಾನಸಭಾಕ್ಷರ ಹೆಸರನ್ನು ಉಲ್ಲೇಖಿಸಿ ಪ್ರಶ್ನೆ ಕೇಳಿದೆ. ಗೌರವಾನ್ವಿತ ಸದನವನ್ನು ಬಿಜೆಪಿ ಮದುವೆ ಛತ್ರ ಎಂದು ಭಾವಿಸಿದೆ. ನಿಯಮ ಮೀರಿ ಸದನ ಸದಸ್ಯರಲ್ಲದವರನ್ನು ಕರೆಸಿ ಭಾಷಣ ಮಾಡಿಸಿ ಯಾವ ಘನ ಕಾರ್ಯ ಸಾಸಿದಂತಾಯಿತು ಎಂದು ಆಕ್ರೋಶ ವ್ಯಕ್ತ ಪಡಿಸಲಾಗಿದ್ದು, ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನು ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ ಎಂದು ಲೇವಡಿ ಮಾಡಿದೆ.

ಪ್ರಜಾಪ್ರಭುತ್ವದ ಘನತೆ ಅರಿಯದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ. ಸದನದ ಸದಸ್ಯರಲ್ಲದವರಿಗೆ ಪ್ರವೇಶವಿಲ್ಲದಿರುವಾಗ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾರನ್ನು ಯಾವ ನಿಯಮಗಳ ಅಡಿಯಲ್ಲಿ ಕರೆಸಲಾಯಿತು, ಅವರ ಭದ್ರತಾ ಸಿಬ್ಬಂದಿಗೆ ಸದನದೊಳಗೆ ಪ್ರವೇಶಿಸಲು ಅನುಮತಿ ನೀಡಿದವರು ಯಾರು.

ಚರ್ಚೆ ನಡೆಸಬೇಕಾದ ಸ್ಥಳದಲ್ಲಿ ಸಮರಂಭ ನಡೆಸಿದ್ದೇಕೆ ? ನಿರೂಪಕರನ್ನ ಸದನದೊಳಗೆ ಕರೆತಂದಿದ್ದೇಕೆ ? ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿನ್ನೆ ವಿಧಾನಸಭೆಯ ಸಭಾಂಗಣದಲ್ಲಿ ನಡೆದ ಜಂಟಿ ಅವೇಶನದಲ್ಲಿ ಭಾಗವಹಿಸಿದ್ದ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಭಾಷಣ ಮಾಡಿದರು. ಅದೇ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉತ್ತಮ ಶಾಸಕ ಪ್ರಶಸ್ತಿ ನೀಡಿ ಸನ್ಮಾನಿಸಲಾ¬ತು. ಕಾಂಗ್ರೆಸ್ ಶಾಸಕಾಂಗ ಪಕ್ಷ ಈ ಕಾರ್ಯಕ್ರವನ್ನು ಬಹಿಷ್ಕರಿಸಿತ್ತು, ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಗಮನಾರ್ಹ ಸಂಗತಿ ಎಂದರೆ ಕಾಂಗ್ರೆಸ್ ಪಕ್ಷದ ಅಕೃತ ಖಾತೆಯಲ್ಲಿ ಮಾತ್ರ ಟೀಕೆ ಮಾಡಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಟ್ವಿಟರ್ ಖಾತೆಗಳಲ್ಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

Facebook Comments